ದಕ್ಷಿಣ ಭಾರತ ಹಾಕಿ ತಂಡಕ್ಕೆ ಆಯ್ಕೆ

Selection for South India Hockey Team
Published on

ಮಡಿಕೇರಿ:

ಇಲ್ಲಿನ ಕೊಡಗು ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಎ. ಜಿ. ಪರ್ಲಿನ್ ಪೊನ್ನಮ್ಮ ದಕ್ಷಿಣ ಭಾರತ ಸಬ್ ಜೂನಿಯರ್ ಮಹಿಳಾ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ದಕ್ಷಿಣ ಭಾರತ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾದ್ದಾಳೆ.

ಈ ಮೊದಲು ಕರ್ನಾಟಕ ಸಬ್ ಜೂನಿಯರ್ ಮಹಿಳೆಯರ ತಂಡದ ಉಪನಾಯಕಿಯಾಗಿ ಆಯ್ಕೆಯಾಗಿ ಎರಡು ಪಂದ್ಯಗಳಲ್ಲಿ ಉತ್ತಮ ಆಟಗಾರ್ತಿ ಎಂಬ ಬಿರುದುಗಳಿಸಿ ಇದೀಗ ದಕ್ಷಿಣ ಭಾರತ ಸಬ್ ಜೂನಿಯರ್ ಮಹಿಳಾ ತಂಡದ ಚುಕ್ಕಾಣಿ ಹಿಡಿದಿದ್ದಾಳೆ. ಪರ್ಲಿನ್ ಪೊನ್ನಮ್ಮ ಸೆ. 7 ರವರೆಗೆ ಹರಿಯಾಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಭಾಗ ಚಾಂಪಿಯನ್‌ಶಿಪ್ ನಲ್ಲಿ ಪಾಲ್ಗೊಂಡಿದ್ದಾಳೆ ಎಂದು ಕೊಡಗು ವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net