ವಾಲಿಬಾಲ್‌ನಲ್ಲಿ ರಾಫೆಲ್ಸ್ ಇಂಟರ್‌ನ್ಯಾಷನಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಚಿತ್ರ 24ಎಸ್ ಡಿ ಪಿ 3
ಹೊದವಾಡದ ರಾಫೆಲ್ಸ್ ಇಂಟರ್‌ನ್ಯಾಷನಲ್ ಪಿಯು ಕಾಲೇಜು ಬಾಲಕರ ತಂಡವು ಚಾಂಪಿಯನ್‌ಆಗಿ ಹೊರಹೊಮ್ಮಿತು.
Published on

ಸಿದ್ದಾಪುರ: ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಡಿಕೇರಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೊದವಾಡದ ರಾಫೆಲ್ಸ್ ಇಂಟರ್‌ನ್ಯಾಷನಲ್ ಪಿಯು ಕಾಲೇಜು ಬಾಲಕರ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಫೈನಲ್ ಪಂದ್ಯದಲ್ಲಿ ಮಡಿಕೇರಿಯ ಸಂತ ಮೈಕಲರ ಪಿಯು ಕಾಲೇಜು ತಂಡವನ್ನು 2-0 ನೇರ ಸೆಟ್‌ಗಳಿಂದ ಮಣಿಸಿ ರಾಫೆಲ್ಸ್ ಪಿಯು ಕಾಲೇಜು ತಂಡವು ಪ್ರಶಸ್ತಿ ಗೆದ್ದಿತ್ತು.

ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಕಾವೇರಿ ಕಾಲೇಜು ತಂಡವನ್ನು 2-1 ಸೆಟ್‌ಗಳ ಅಂತರದಿಂದ ಸೋಲಿಸಿತು. ಕ್ವಾಟರ್ ಫೈನಲ್ ಪಂದ್ಯದಲ್ಲಿ ಅರುಣ ಪದವಿಪೂರ್ವ ಕಾಲೇಜು ಚೇರಂಬಾಣೆ ತಂಡವನ್ನು 2-0 ನೇರ ಸೆಟ್‌ಗಳಿಂದ ಸೋಲಿಸಿತ್ತು.

ರಾಫೆಲ್ಸ್ ಇಂಟರ್ ನ್ಯಾಷನಲ್ ಪಿಯು ಕಾಲೇಜು ತಂಡವು ಸತತ ಮೂರನೇ ಬಾರಿಗೆ ಮಡಿಕೇರಿ ತಾಲೂಕಿನ ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ್ದು, ಕಳೆದ ವರ್ಷ ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಫೆಲ್ಸ್ ಇಂಟರ್ ನ್ಯಾಷನಲ್ ಪಿಯು ಕಾಲೇಜು ಬಾಲಕರ ತಂಡವು ಕೊಡಗು ತಂಡವನ್ನು ಪ್ರತಿನಿದಿಸಿತ್ತು.

ವಿಜೇತರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ರಾಫೆಲ್ಸ್ ಇಂಟರ್‌ನ್ಯಾಷನಲ್ ಪಿಯು ಕಾಲೇಜಿನ ಉಪನ್ಯಾಸಕರಾದ ಹುಸೇನ್, ತರಬೇತುದಾರ ಇಸ್ಮಾಯಿಲ್ ಕಂಡಕರೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net