ಕರ್ನಾಟಕ ರೀಜಿನಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 5ನೇ ಸ್ಥಾನ: ರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾದ ಎಂ.ಎಸ್.ಜ್ಞಾನವಿ

1
Published on

ಮಂಡ್ಯ: ಕರ್ನಾಟಕ ರೀಜಿನಲ್ ಚೆಸ್ ಚಾಂಪಿಯನ್‌ಶಿಪ್‌ನ 2023-24ನೇ ಸಾಲಿನ 14ನೇ ವರ್ಷದ ಬಾಲಕಿಯರ ವಿಭಾಗದಲ್ಲಿ ಮಂಡ್ಯದ ರಾಯಲ್ ಚೆಸ್ ಅಕಾಡೆಮಿಯ ವಿದ್ಯಾರ್ಥಿನಿ ಎಂ.ಎಸ್.ಜ್ಞಾನವಿ ಅವರು 5ನೇ ಸ್ಥಾನ ಪಡೆದು ರಾಷ್ಟ್ರೀಯ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ಮಂಡ್ಯ ರಾಯಲ್ ಚೆಸ್ ಅಕಾಡೆಮಿ ತರಬೇತುದಾರ ಎಂ.ಎಸ್.ಚೇತನ್ ತಿಳಿಸಿದರು.

ಜು.21 ಮತ್ತು 22ರಂದು ಬೆಂಗಳೂರಿನ ಗಂಗಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ಚೆಸ್ ಪಂದ್ಯಾವಳಿಯಲ್ಲಿ ಜ್ಞಾನವಿ ಭಾಗವಹಿಸಿ 9ನೇ ಸುತ್ತಿನಲ್ಲಿ 7 ಅಂಕ ಪಡೆದು ರಾಷ್ಟ್ರೀಯ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಜ್ಞಾನವಿ ಅವರು ಮಂಡ್ಯದ ಸ್ಯಾಂಥೋಮ್ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಚೆಸ್ ತರಬೇತಿ ಪಡೆಯುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2018ರಿಂದಲೂ ನಮ್ಮ ಸಂಸ್ಥೆ ಚೆಸ್ ತರಬೇತಿ ನೀಡುತ್ತಿದ್ದು, ಕೋವಿಡ್ ಮತ್ತು ನಂತರದ ದಿನಗಳಲ್ಲೂ ನಿತ್ಯ 7 ಗಂಟೆಗೆ ಆನ್‌ಲೈನ್ ತರಗತಿ ನಡೆಸಲಾಗುತ್ತಿದೆ. ಇಂದು ವಿದೇಶಗಳಲ್ಲಿರುವ ಚೆಸ್ ಆಟಗಾರರು ಕಲಿಯುತ್ತಿದ್ದಾರೆ ಎಂದು ಹೇಳಿದರು.

ಜ್ಞಾನವಿ ಮಾತನಾಡಿ, 3ನೇ ತರಗತಿಯಿಂದಲೂ ನಾನು ಚೆಸ್ ಅಭ್ಯಾಸ ಮಾಡುತ್ತಿದ್ದು, ಇದರಿಂದಾಗಿ ನನ್ನ ಏಕಾಗ್ರತೆ ಹೆಚ್ಚಿದೆ. ಸಂಸ್ಥೆಯಲ್ಲಿ ನಿತ್ಯವೂ ತರಬೇತಿ ಹೊಸತನದಿಂದ ಕೂಡಿದ್ದು, ಇದು ಸಾಧನೆಗೆ ಪೂರಕವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net