ನಗರಕೆರೆ ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

ಮದ್ದೂರು ತಾಲೂಕಿನ ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಯು.ಆರ್.ರೂಪ, ಉಪಾಧ್ಯಕ್ಷರಾಗಿ ಎನ್.ಪಿ.ರಾಜಶೇಖರ್ ಅವರು ಚುನಾಯಿತರಾದರು. ನ.ಲಿ.ಕೃಷ್ಣ, ಶೇಖರ್, ಕರಿಯಪ್ಪ, ಎನ್.ಆರ್.ಪ್ರಸನ್ನ, ದೊಡ್ಡಲಿಂಗೇಗೌಡ, ನಾಗರಾಜು, ಪುಟ್ಟೇಗೌಡ, ಕುಮಾರ್ ಮತ್ತಿತರರಿದ್ದರು.

Published on

ಮದ್ದೂರು: ತಾಲೂಕಿನ ನಗರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಯು.ಆರ್.ರೂಪ, ಉಪಾಧ್ಯಕ್ಷರಾಗಿ ಎನ್.ಪಿ.ರಾಜಶೇಖರ್ ಅವರು ಆಯ್ಕೆಗೊಂಡರು.

ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯು.ಆರ್.ರೂಪ, ಪದ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಪಿ.ರಾಜಶೇಖರ್, ಧನಂಜಯ ಅವರು ನಾಮ ಪತ್ರ ಸಲ್ಲಿಸಿದ್ದರು.

ಚುನಾವಣಾ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಯು.ಆರ್.ರೂಪ ಹಾಗೂ ಉಪಾಧ್ಯಕ್ಷರಾಗಿ ಎನ್.ಪಿ.ರಾಜಶೇಖರ್ ಅವರು ಕ್ರಮವಾಗಿ 7 ಮತಗಳನ್ನು ಪಡೆದು ಜಯ ಪಡೆದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪದ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಧನಂಜಯ ಅವರು ಕ್ರಮವಾಗಿ 5 ಮತಗಳನ್ನು ಪಡೆದು ಸೋಲು ಕಂಡರು. ಚುನಾವಣಾಧಿಕಾರಿಯಾಗಿ ಸಂತೋಷ್ ಕರ್ತವ್ಯ ನಿರ್ವಹಿಸಿದ್ದರು. ಮುಖಂಡರಾದ ಎನ್.ಆರ್.ಪ್ರಸನ್ನ, ನ.ಲಿ.ಕೃಷ್ಣ, ದೊಡ್ಡಲಿಂಗೇಗೌಡ, ನಾಗರಾಜು, ಪುಟ್ಟೇಗೌಡ, ಎನ್.ಎನ್.ಪ್ರಸನ್ನ, ಕುಮಾರ್, ಸಂಘದ ನಿರ್ದೇಶಕರಾದ ಶೇಖರ್, ಕರಿಯಪ್ಪ, ಗ್ರಾಪಂ ಸದಸ್ಯ ಹನುಮೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net