

ಹುಬ್ಬಳ್ಳಿ: ಕರ್ನಾಟಕ ರಾಜ್ಯ ನದಾಫ್ ಹಿತಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸಿ.ಎಸ್. ಮೆಹಬೂಬ್ ಭಾಷಾ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಎಚ್.ಎ. ಇಳಕಲ್, ಅಲ್ಲಾಭಕ್ಷ ನದಾಫ್, ರಾಜಾಭಕ್ಷವಲಿ ಬಂಧುನವರ್, ನಭಿಸಾಬ್ ಅಮೀನಸಾಬ್ ನದಾಫ್, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಇಲಿಯಾಸ್ ನದಾಫ್. ಖಜಾಂಚಿಯಾಗಿ ರಾಜೇಸಾಬ್ ನದಾಫ್, ಕಾರ್ಯದರ್ಶಿಯಾಗಿ ಬಾಬಾಜಾನ್ ನದಾಫ್, ಸಂಘಟನಾ ಕಾರ್ಯದರ್ಶಿಯಾಗಿ ಚಂದುಸಾಬ್ ನದಾಫ್ ಆಯ್ಕೆಯಾದರು.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಸಿ. ಎಸ್. ಮೆಹಬೂಬ್ ಭಾಷಾ, ರಾಜ್ಯದಲ್ಲಿ ಮುಸ್ಲಿಂ ಸಮಾಜದ ಒಳಪಂಗಡದಲ್ಲಿರುವ ನದಾಫ್/ಪಿಂಜಾರ ಸಮಾಜದ ಸುಮಾರು 28 ಲಕ್ಷ ಜನರಿದ್ದಾರೆ. ಇವರಿಗೆ ರಾಜ್ಯದಲ್ಲಿ ರಾಜಕೀಯದಲ್ಲಿ ಸ್ಥಾನಮಾನ ಇರುವುದಿಲ್ಲ. ಕಳೆದ 35 ವರ್ಷಗಳಿಂದ ಎಂಎಲ್‌ಎ, ಎಂಪಿ, ಎಂಎಲ್‌ಸಿ, ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನವು ಸಿಕ್ಕಿಲ್ಲ. ಎಲ್ಲ ಪಕ್ಷದವರು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ನಾವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಲು ಸಂಘದ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಮೆಹಬೂಬ್ ಸಾಬ್ ನದಾಫ್, ಕಲಂದರ ಶರೀಫ್ ಬಾವಿಮನಿ, ಶಬ್ಬೀರ್ ನದಾಫ್, ಇತರರು ಇದ್ದರು.