ಗಣೇಶೋತ್ಸವ ಸಮಿತಿಗೆ ಆಯ್ಕೆ

Selection for Ganeshotsava Committee
Published on

ಮಡಿಕೇರಿ:
ಮಡಿಕೇರಿ ಬನ್ನಿಮಂಟಪದ ಸ್ವಸ್ತಿಕ್ ಯುವ ವೇದಿಕೆಯ ೨೩ನೇ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಅಂಚೆಮನೆ ಸತೀಶ್ ಕುಟ್ಟಪ, ಉಪಾಧ್ಯಕ್ಷರಾಗಿ ವಿಕ್ರಂ ವಿಜಯ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಯಣ್ಣ ಡಿ. ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕುಲದೀಪ್ ಪೂನಾಚ್ಚ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಂಟಿ ಕಾರ್ಯದರ್ಶಿಯಾಗಿ ಶಿವರಾಜ್, ಸಹ ಕಾರ್ಯದರ್ಶಿಯಾಗಿ ಚರಣ್, ಖಜಾಂಚಿಯಾಗಿ ಹೊಯ್ಸಳ, ಜಂಟಿ ಖಜಾಂಜಿಯಾಗಿ ಮಿಲನ್, ಸಹ ಖಜಾಂಚಿ ಾಗಿ ಪುನೀತ್, ಅಲಂಕಾರ ಸಮಿತಿಗೆ ರಮೇಶ್, ಜಗ್ಗಿ ಮೆರವಣಿಗೆ ಸಮಿತಿಗೆ ಸೋನಲ್ ಪೂಜಾರಿ ಹಾಗೂ ಪ್ರಶಾಂತ್, ಆಹಾರ ಸಮಿತಿಗೆ ಹೇಮಂತ್ ಕುಮಾರ್ ಹಾಗೂ ಜ್ಞಾನ ಕುಮಾರ್, ಧ್ವನಿವರ್ಧಕ ಸಮಿತಿಗೆ ಮನು ಹಾಗೂ ಬ್ರಿಜೇಶ್, ಗೌರವ ಅಧ್ಯಕ್ಷರಾಗಿ ಗಣೇಶ್ ಹಾಗೂ ಮಂಜುನಾಥ್, ನಿರ್ದೇಶಕರಾಗಿ ಪ್ರಸಾದ್ ಎಂ. ಎಸ್., ಸಲಹೆಗಾರರಾಗಿ ಸವಿತಾ ರಾಕೇಶ್, ಪ್ರೇಮ ರಾಮಯ್ಯ, ರಶ್ಮಿ ಪ್ರವೀಣ್ ನೇಮಕವಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net