

ಅರಸೀಕೆರೆ: ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಎರಡು ಮಹಿಳಾ ಮೀಸಲು ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಸಂಘದಲ್ಲಿ 416 ಷೇರುದಾರರಿದ್ದು, 336 ಸದಸ್ಯರು ಹಕ್ಕು ಚಲಾಯಿಸಿದರು. ನಗರಸಭೆ ಮಾಜಿ ಸದಸ್ಯೆ ಒ.ಜಿ.ಗೀತಾ 251 ಹಾಗೂ ಎಂ.ಆರ್.ಮಮತಾ 213 ಮತಗಳಿಸಿ ಗೆಲುವು ಸಾಧಿಸಿದರು. ಮತ್ತೊಬ್ಬ ಅಭ್ಯರ್ಥಿ ಶಿಲ್ಪಾ ಸತೀಶ್ 131 ಮತ ಪಡೆದಿದ್ದರೆ, ಒಂದು ಮತ ತಿರಸ್ಕೃತಗೊಂಡಿತು. ಸಹಕಾರ ಅಧಿಕಾರಿ ವಸೀಮ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಒಟ್ಟು 13 ಸದಸ್ಯ ಬಲದ ಸಂಘದಲ್ಲಿ 11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಜಿ.ಸಿ.ಪ್ರವೀಣ್ ಕುಮಾರ್, ಈರಯ್ಯ, ಎಚ್.ಟಿ.ಕುಮಾರಸ್ವಾಮಿ, ಎನ್.ಬಿ.ಜಯಣ್ಣ, ಎಂ.ಸಿ.ಜಗದೀಶ್, ಕೆ.ವಿ.ನಿರ್ವಾಣಸ್ವಾಮಿ ಹಾಗೂ ವಿಜಯಕುಮಾರ್(ಸಾಮಾನ್ಯಕ್ಷೇತ್ರ), ಜೆ.ಮಂಜುನಾಥ್(ಬಿಸಿಎ), ಬಿ.ಎನ್.ರೇಣುಕಾ ಪ್ರಸಾದ್(ಬಿಸಿಬಿ), ಒ.ಜಿ.ಗೀತಾ 251 ಹಾಗೂ ಎಂ.ಆರ್.ಮಮತಾ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಹಾಗೂ ಪ.ಜಾತಿ ಸ್ಥಾನಗಳು ಖಾಲಿ ಉಳಿದಿವೆ.