ಸಂದರ್ಶನದಲ್ಲಿ 61 ವಿದ್ಯಾರ್ಥಿಗಳು ಆಯ್ಕೆ

Published on

ಹುಬ್ಬಳ್ಳಿ: ಇಲ್ಲಿಯ ರಾಜನಗರದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಶಾ ಡಿ.ಜೆ. ಛೇಡಾ ಐಟಿಐನಲ್ಲಿ ಬೆಂಗಳೂರಿನ ಟೊಯೋಟಾ ಕಿಲೋರ್ಸ್ಕರ ಲಿಮಿಟೆಡ್ ನವರು ಏರ್ಪಡಿಸಿದ್ದ ಕ್ಯಾಂಪಸ್ ಸಂದರ್ಶನದಲ್ಲಿ 61 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಅಪ್ರೆಂಟಿಸ್ ತರಬೇತಿಗಾಗಿ ಸಂದರ್ಶನ ನಡೆಸಲಾಗಿತ್ತು. ಇಲೆಕ್ಟ್ರಿಶಿಯನ್- 15, ಮೆಕ್ಯಾನಿಕ್- 9, ಫಿಟ್ಟರ್- 19, ಮೆಕ್ಯಾನಿಕ್ ಡಿಸೇಲ್- 8, ವೆಲ್ಡರ್- 7, ರ್ಟನರ್- 3 ಸೇರಿ 61 ಜನರನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಸಂಸ್ಥೆಯ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಅಭಿನಂದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net