ವಿಶ್ವವಿದ್ಯಾಲಯ ಬಾಲ್​ ಬ್ಯಾಡ್ಮಿಂಟನ್​ ತಂಡಕ್ಕೆ ಆಯ್ಕೆ

Selected for the University Ball Badminton Team
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಬಾಲ್​ ಬ್ಯಾಡ್ಮಿಂಟನ್​ ತಂಡಕ್ಕೆ ಆಯ್ಕೆಯಾದ ಚಡಚಣದ ಸಂಗಮೇಶ್ವರ ಮಹಾವಿದ್ಯಾಲಯದ ಪೂಜಾ ಸೋಲಂಕರ, ನಾಗಮ್ಮ ಗೌಡೆ ಜತೆ ಶಿಕ್ಷಕರು ಇದ್ದಾರೆ.
Published on

ಚಡಚಣ : ಇತ್ತೀಚೆಗೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಬಾಲ್​ ಬ್ಯಾಡ್ಮಿಂಟನ್​ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಇಲ್ಲಿನ ಸಂಗಮೇಶ್ವರ ಮಹಾವಿದ್ಯಾಲಯದ ಪೂಜಾ ಸೋಲಂಕರ ಆಯ್ಕೆಯಾಗಿದ್ದಾರೆ.

ತಂಡದಲ್ಲಿ ಕಾಯ್ದಿರಿಸಿದ ಆಟಗಾರ್ತಿಯಾಗಿ ನಾಗಮ್ಮ ಗೌಡೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net