

ಕಲಘಟಗಿ: ಪಟ್ಟಣದ ಗುಡ್ನ್ಯೂಸ್ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಉಪನಿರ್ದೇಶಕರ ಕಚೇರಿ(ಪಪೂ) ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗುಡ್ನ್ಯೂಸ್ ಪಪೂ ಮಹಾವಿದ್ಯಾಲಯದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಸಂಸ್ಥೆಯ ಆಡಳಿತಾಧಿಕಾರಿ ರೇ.ಬ್ರ ವರ್ಗಿಸ್ ಕೆ.ಜೆ., ರೇ.ಬ್ರ. ಅರುಳಾನಂದಮ್ ಪ್ರಾಚಾರ್ಯು ನವೀನಾ ರೇಡ್ಡರ, ರಾಮು ಲಮಾಣಿ, ಸಿಬ್ಬಂದಿ ಇದ್ದರು.