

ಬೀಳಗಿ:ಸ್ಥಳಿಯ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಜಮಖಂಡಿ ಬಿ.ಎಲ್.ಡಿ.ಇ. ಕಾಲೇಜಿನಲ್ಲಿ ಸೆ. 24 ರಂದು ನಡೆದ ಜಿಲ್ಲಾಮಟ್ಟದ ಸ್ವಿಮ್ಮಿಂಗ್ ವಾಟರ್ ಪೋಲೊ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸ್ವಿಮ್ಮಿಂಗ್ ವಾಟರ್ ಪೋಲೋ ಕ್ರೀಡೆಯಲ್ಲಿ ಅಮೃತಾ ಕೋಲಕಾರ, ಪೂರ್ಣಿಮಾ ಸಾಲಿಮಠ, ಸುಸ್ಮಿತಾ ಪೂಜಾರಿ, ಕಾವೇರಿ ವಾಲಿಕಾರ, ಸಂಗಮ್ಮ, ಪೂಜಾ ಸೂಳಿಕೇರಿ, ಕೀರ್ತಿ ಗರದ, ಪ್ರೀತಿ ಸೊನ್ನದ, ರೇಣುಕಾ ತೇಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕರ ವಿಭಾಗದಲ್ಲಿ ಮಂಜುನಾಥ ಮೆಳ್ಳಿಗೇರಿ, ಮಂಜುನಾಥ ನರೆಯವರ, ಗಣೇಶ ಚಲವಾದಿ ಇವರೆಲ್ಲರೂ ದ್ವೀತಿಯ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಸಂಸ್ಥಾಪಕ ಅಧ್ಯ ಎಂ.ಎನ್. ಪಾಟೀಲ, ಆಡಳಿತಾಧಿಕಾರಿ ವಿ.ಎಸ್. ಮೇಟಿ, ವಾಣಿಜ್ಯ ವಿಭಾಗದ ಪ್ರಾಚಾರ್ಯ ಜಿ ಆರ್. ಪಾಟೀಲ, ವಿಜ್ಞಾನ ವಿಭಾಗದ ಎಂ.ಬಿ. ವೆಂಕಟಾಪುರ, ಕೋಚ್ ಸಚಿನ ಕೆಂಚನ್ನರ ಹರ್ಷ ವ್ಯಕ್ತಪಡಿಸಿದ್ದಾರೆ.
ಬೀಳಗಿ ಪಟ್ಟಣದ ಸ್ಥಳಿಯ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಸ್ವಿಮ್ಮಿಂಗ್ ವಾಟರ್ ಪೋಲೊ ಕ್ರೀಡಾ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆ ಅಧ್ಯ ಎಂ.ಎನ್. ಪಾಟೀಲ, ಆಡಳಿತಾಧಿಕಾರಿ ವಿ.ಎಸ್.ಮೇಟಿ ಇದ್ದಾರೆ.