

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಟೆಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಧರೆಣ್ಣವರ ಕುಟುಂಬದ ನಾಲ್ವರು ಉತ್ತಮ ಪ್ರದರ್ಶನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
45 ವರ್ಷ ಮೇಲ್ಪಟ್ಟ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚನ್ನಬಸಪ್ಪ ಧರೆಣ್ಣವರ್ ದ್ವಿತೀಯ , ಡಬಲ್ಸ್ನಲ್ಲಿ ಪ್ರಥಮ ಸ್ಥಾನ, 45 ವರ್ಷದೊಳಗಿನ ಸಿಂಗಲ್ಸ್ ವಿಭಾಗದಲ್ಲಿ ಗುರುಸಿದ್ದಪ್ಪ ಧರೆಣ್ಣವರ ದ್ವಿತೀಯ ಹಾಗೂ ಡಬಲ್ಸ್ನಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.
40 ವರ್ಷ ಮೇಲ್ಪಟ್ಟ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸುನಂದಾ ಧರೆಣ್ಣವರ ಪ್ರಥಮ, ಡಬಲ್ಸ್ನಲ್ಲಿ ಪ್ರಥಮ ಸ್ಥಾನ, 40 ವರ್ಷದೊಳಗಿನ ಡಬಲ್ಸ್ನಲ್ಲಿ ಭಾರತಿ ಧರೆಣ್ಣವರ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜೇತರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಪ್ರಶಸ್ತಿ ವಿತರಿಸಿದರು. ಮಂಜುನಾಥ ಯಡಳ್ಳಿ, ಸುರೇಶ ಜಟ್ಟೆನ್ನವರ, ಪಿ.ಎಫ್. ಗುಡೇನಕಟ್ಟಿ, ರಮೇಶ ಲಿಂಗದಾಳ, ಇತರರು ಇದ್ದರು.