ರಾಜ್ಯ ಮಟ್ಟಕ್ಕೆ ಆಯ್ಕೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕುಮಟಾದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಧಾರವಾಡದ ಗುಬ್ಬಚ್ಚಿ ಗೂಡು ಪ್ರೌಢ ಶಾಲೆಯ ತಂಡ ಪ್ರದರ್ಶಿಸಿದ ನಾಟಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಗುಬ್ಬಚ್ಚಿ ಗೂಡು ಶಾಲೆ ಮಕ್ಕಳು ಡಾ. ಲಿಂಗರಾಜ ರಾಮಾಪುರ ಬರೆದ "ನೀರ ಬಾರ್​' ಪ್ರದರ್ಶಿಸಿದ್ದರು. ಸ್ಪರ್ಧೆಯಲ್ಲಿ 6 ಜಿಲ್ಲೆಗಳ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಧಾರವಾಡ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಆಯ್ಕೆಯಾಗುವುದರ ಜತೆಗೆ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟನೆ ಪ್ರಶಸ್ತಿಗಳನ್ನು ಸಹ ಪಡೆದಿದೆ.

ತಂಡದ ಸಾಧನೆಗೆ ಡಿಡಿಪಿಐ ಎಸ್​. ಎಸ್​. ಕೆಳದಿಮಠ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂಧಗಿ, ಮಂಜುನಾಥ ಅಡವೇರ, ಬಿಆರ್​ಸಿ ವಿಜಯಲಕ್ಷ್ಮೀ ಎಚ್​. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net