ರಾಷ್ಟ್ರ ಮಟ್ಟದ ಕುಸ್ತಿ ಚಾಂಪಿಯನ್‌ಶಿಪ್‌ಗೆ ಆಯ್ಕೆ

4-Kusti-1-1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗದಗ ಜಿಲ್ಲೆಯಲ್ಲಿ ಜರುಗಿದ 15 ವರ್ಷದೊಳಗಿನ ರಾಷ್ಟ್ರ ಮಟ್ಟದ ಕುಸ್ತಿ ಆಯ್ಕೆ ಟಯಲ್ಸ್ ನಲ್ಲಿ ಧಾರವಾಡ ಕ್ರೀಡಾ ವಸತಿ ನಿಲಯದ 10 ಕುಸ್ತಿಪಟುಗಳು ಆಯ್ಕೆಯಾಗಿದ್ದಾರೆ. ಪ್ರಭಾವತಿ ಲಂಗೋಟಿ 39 ಕೆ.ಜಿ, ಜಾಹ್ನವಿ ಕೆ. 46 ಕೆ.ಜಿ, ಪುಷ್ಪಾ ನಾಯಕ 50 ಕೆ.ಜಿ, ಮಾದೇಶ ಭತ್ತೆ 44 ಕೆ.ಜಿ, ಯಂಕಪ್ಪ ಕೂಡಗಿ 48 ಕೆ.ಜಿ, ಸುದೀಪ ನೇಸರಗಿ 52 ಕೆ.ಜಿ, ದಾದಾಪೀರ ಸೈಯದನವರ 57 ಕೆ.ಜಿ, ಚೇತನ ತುಕೋಜಿ 57 ಕೆ.ಜಿ, ಶಿವಾಜಿ ಗಾಯಕವಾಡ 62 ಕೆ.ಜಿ, ಅಮನ್ ದೊಡಮನಿ 38 ಕೆ.ಜಿ ವಿಭಾಗದಲ್ಲಿ ಪ್ರಥಮ ಗಳಿಸಿ ಆಯ್ಕೆಗಿದ್ದಾರೆ. ಈ ಕುಸ್ತಿಪಟುಗಳು ಜೂ. 20ರಿಂದ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಕುಸ್ತಿ ಪಟುಗಳು ಹಾಗೂ ತರಬೇತುದಾರ ಶಿವಪ್ಪ ಪಾಟೀಲ ಅವರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ. ಮಂಜುನಾಥ ಸ್ವಾಮಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net