ಕೇರಂ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

gan (8)
Published on

ಕುಂದಾಪುರ: ಸಿಐಎಸ್‌ಸಿಇ ಗೇಮ್ಸ್ ಮತ್ತು ಸ್ಪೋರ್ಟ್ಸ್- 2025ರ ಅಂಗವಾಗಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ನಡೆದ ಪ್ರಾದೇಶಿಕ ಮಟ್ಟದ ಕೇರಂ ಟೂರ್ನಮೆಂಟ್ ಸ್ಪರ್ಧೆಯಲ್ಲಿ ಹಲವು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

* ಫಲಿತಾಂಶ: 14 ವಯೋಮಿತಿಯ ಹುಡುಗರ ಸಿಂಗಲ್ಸ್‌ನಲ್ಲಿ ಪ್ರಜ್ವಲ್ ಎಸ್. ಹಾಗೂ ಡಬಲ್ಸ್‌ನಲ್ಲಿ ಕರಣ್ ಆರ್.ನಾಯ್ಕ, ನೂಥನ್ ಸ್ವರೂಪ್ ಎನ್. ಮತ್ತು ಹುಡುಗಿಯರ ಸಿಂಗಲ್ಸ್‌ನಲ್ಲಿ ಎಂ.ಮಿಲನಾ ಹಾಗೂ ಡಬಲ್ಸ್‌ನಲ್ಲಿ ಆರಾಧ್ಯ ಎಂ. ಮತ್ತು ದೀಕ್ಷಿತಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

17 ವಯೋಮಿತಿಯ ಹುಡುಗರ ಸಿಂಗಲ್ಸ್‌ನಲ್ಲಿ ನಿಶಾಂತ್ ಹಾಗೂ ಡಬಲ್ಸ್‌ನಲ್ಲಿ ಎಸ್.ಶ್ರೀನಿಕೇತ್ ಮತ್ತು ಸಚಿನ್ ಎಸ್.ಎನ್. ಹಾಗೂ ಹುಡುಗಿಯರ ಸಿಂಗಲ್ಸ್‌ನಲ್ಲಿ ವಿಶ್ಮಿತಾ ಪಿ. ಹಾಗೂ ಡಬಲ್ಸ್‌ನಲ್ಲಿ ಪ್ರಾಚಿ ಶಿಲ್ಪಪ್ರಸಾದ್ ಮತ್ತು ಸಹಿತಾ ಪಿ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

19 ವಯೋಮಿತಿಯ ಹುಡುಗರ ಸಿಂಗಲ್ಸ್‌ನಲ್ಲಿ ಅಭಿಷೇಕ್ ವಿ. ಹಾಗೂ ಡಬಲ್ಸ್‌ನಲ್ಲಿ ಯಶ್ವಂತ್ ಎಂ. ಮತ್ತು ದ್ರುಪದ ಬಿ.ಎಸ್. ಹಾಗೂ ಹುಡುಗಿಯರ ಸಿಂಗಲ್ಸ್‌ನಲ್ಲಿ ಎಚ್.ಎಂ.ಜಾಹ್ನವಿ ಹಾಗೂ ಡಬಲ್ಸ್‌ನಲ್ಲಿ ಕಾಂಚನಾ ಟಿ. ಮತ್ತು ಕಾವ್ಯಾ ಟಿ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಮಾರೋಪ ಸಮಾರಂಭ: ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಾರುತಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲೆ ಶೋಭಾ ಎಂ., ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಾಂಶುಪಾಲ ಶರಣಕುವಾರ, ನಿರ್ಣಾಯಕರಾಗಿದ್ದ ಪ್ರಫುಲ್, ಸನತ್‌ಕುವಾರ್, ದೀಕ್ಷಿತ್ ಡಿ.ಎ., ಶರಣ್, ಖುಷಿ ಬಂಗೇರ, ಕೌಸಲ್ಯಾ ಬಂಗೇರ, ಮೋಹಿತ್ ಎಸ್.ಎ., ಮೋಹಿತ್ ಬೆಂಗಳೂರು, ಸುಮನಾ, ರಾಹುಲ್, ಸ್ಟೀವನ್, ಸುಮಂತ್, ಆನಂದ್, ಭೂಮಿಕಾ ಶೆಟ್ಟಿ, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ, ವಿವಿಧ ಶಾಲೆಗಳ ಅಧ್ಯಾಪಕರು, ಸ್ಪರ್ಧಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಪ್ರಗತಿ ಎನ್.ಜಿ. ಸ್ವಾಗತಿಸಿದರು. ಉತ್ತಮ್ ಬಿ. ವಂದಿಸಿದರು. ದಯಾಸಾಗರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net