ಹಳೇ ಮಿರ್ಲೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಆಯ್ಕೆ

IMG-20250222-WA0029
ಹಳೇ ಮಿರ್ಲೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪವಿತ್ರಾ ಮಂಜುನಾಥ್, ಉಪಾಧ್ಯಕ್ಷ ಮಂಜುಳಾ ರವಿ ಅವರನ್ನು ಸದಸ್ಯರು ಅಭಿನಂದಿಸಿದರು. ರಾಘು, ಎಚ್.ಟಿ.ಸ್ವಾಮಿ, ನಾಗಣ್ಣ, ವೆಂಕಟೇಶ್, ಅಂಬರೀಷ್, ನೂತನ್, ಶಿಳಿಶ್, ಮನು, ಗೋವಿಂದ್‌ರಾಜ್, ಭಾರತಿ ಇತರರಿದ್ದರು.
Published on

ಸಾಲಿಗ್ರಾಮ: ಹಳೇ ಮಿರ್ಲೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಪವಿತ್ರಾ ಮಂಜುನಾಥ್, ಉಪಾಧ್ಯಕ್ಷರಾಗಿ ಮಂಜುಳಾ ರವಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಶಿವಕುಮಾರ್ ಘೋಷಿಸಿದರು.

ಹಳೇ ಮಿರ್ಲೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಪವಿತ್ರಾ ಮಂಜುನಾಥ್ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಣಿ ಗೋವಿಂದೇಗೌಡ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ರವಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಬೆಂಬಲಿತ ಮಂಜುಳಾ ರವಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಬೆಂಬಲಿತ ರಾಣಿ ಗೋವಿಂದೇಗೌಡ, ಮಣಿ, ಮಂಜುನಾಥ್, ಸುನೀತಾ, ಶಾಂತಾ, ನಾಮನಿರ್ದೇಶಕ ಸದಸ್ಯೆ ರೂಪಾ ಸತೀಶ್ ಚುನಾವಣೆಯಲ್ಲಿ ಭಾಗವಹಿಸದೆ ಹೊರ ಉಳಿದರು.

ಚುನಾವಣೆಯಲ್ಲಿ ಪವಿತ್ರಾ ಮಂಜುನಾಥ್, ಮಂಜುಳಾ ರವಿ, ಶಿಲ್ಪಾ ಎಚ್.ಟಿ.ಸ್ವಾಮಿ, ಆಶಾ ಅಂಬರೀಷ್, ಉಷಾ ಮಹೇಶ್, ಕಮಲಮ್ಮ ಸೋಮಯ್ಯ ಚುನಾವಣೆಯಲ್ಲಿ ಭಾಗವಹಿಸಿದರು. ಪವಿತ್ರಾ ಮಂಜುನಾಥ್ 6 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.

ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ರಾಘು, ಮಾಜಿ ಅಧ್ಯಕ್ಷರಾದ ಎಚ್.ಟಿ.ಸ್ವಾಮಿ, ನಾಗಣ್ಣ, ಮಾಜಿ ಸದಸ್ಯ ವೆಂಕಟೇಶ್, ಗ್ರಾಮದ ಮುಖಂಡರಾದ ಅಂಬರೀಷ್, ನೂತನ್, ತಿಳಿಶ್, ಮಹೇಶ್, ಮನು, ಗೋವಿಂದ್ ರಾಜ್, ಕಾರ್ಯದರ್ಶಿ ಭಾರತಿ, ಹಾಲು ಪರೀಕ್ಷಕಿ ಅನಸೂಯಾ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net