ವಾಲಿಬಾಲ್​ನಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Selected for the district level in volleyball
Published on

ವಿಜಯಪುರ : ಶಾಲಾ ಶಿಕ್ಷಣ ಇಲಾಖೆ ೇತ್ರ ಶಿಕ್ಷಣ ಅಧಿಕಾರಿಗಳ ಕಾರ್ಯಾಲಯ ನಗರ ವಲಯದ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ವಾಲಿಬಾಲ್​ ಕ್ರೀಡಾಕೂಟದಲ್ಲಿ ಇಲ್ಲಿನ ಆದರ್ಶನಗರ ಬಡಾವಣೆಯ ಎಕ್ಸಲಂಟ್​ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರ್ಮನ್​ ಬಸವರಾಜ ಕೌಲಗಿ, ನಿರ್ದೇಶಕ ಆರ್​.ಎಸ್​. ಕೌಲಗಿ, ಮುಖ್ಯ ಗುರು ಎಂ.ಐ. ಬಿರಾದಾರ, ದೈಹಿಕ ಶಿಕ್ಷಕ ಆರ್​.ಕೆ. ದೇಶಪಾಂಡೆ, ಬಿ.ಎಸ್​. ಕಪ್ಪನವರ ಅಭಿನಂದಿಸಿದ್ದಾರೆ.

ತಾಲೂಕುಮಟ್ಟದ ವಾಲಿಬಾಲ್​ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿಜಯಪುರದ ಎಕ್ಸಲಂಟ್​ ಕನ್ನಡ ಮಾಧ್ಯಮ ಪ್ರೌಢಶಾಲೆ ಬಾಲಕಿಯರ ತಂಡದ ಜತೆಗೆ ಶಾಲಾ ಸಿಬ್ಬಂದಿ ಇದ್ದಾರೆ. ಸಂಸ್ಥೆಯ ಚೇರ್ಮನ್​ ಬಸವರಾಜ ಕೌಲಗಿ, ನಿರ್ದೇಶಕ ಆರ್​.ಎಸ್​. ಕೌಲಗಿ ಇತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net