ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

Site inspection with officials, steps taken to beautify Taj Bawadi memorial
The Eightfold Path of Donation and Puja Festival
Published on

ವಿಜಯಪುರ: ಕಸಾಪದಿಂದ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.ಕೊಲ್ಹಾರ ಕೆಜಿಎಚ್​ಪಿಎಸ್​ ಸಹಶಿಕ್ಷಕಿ ಶಿವಲೀಲಾ ಕೋರಿ, ಶಾಂತಿನಿಗರದ ಕೆಬಿಎಸ್​ ನಂ. 29ರ ಶಿಕ್ಷಕಿ ಪರವೀನಬಾನು ಶೇಖ, ಮಡಕೇಶ್ವರ ಸರ್ಕಾರಿ ಪ್ರೌಢಶಾಲೆಯ ಬಸವರಾಜ ಹಂಚಲಿ, ನರಸಲಗಿ ಹಿರಿಯ ಪ್ರಾಥಮಿಕ ಶಾಲೆಯ ದ್ರಾಕ್ಷಾಯಣಿ ಪಾಟೀಲ, ಬಸವನಬಾಗೇವಾಡಿ ಎಲ್​ಟಿ ನಂ. 3ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲ್ಲಿಕಾರ್ಜುನ ಯಾಳವಾರ, ಬಸವನಬಾಗೇವಾಡಿಯ ಎಸ್​ಜೆಬಿ ಸಂಯುಕ್ತ ಪ.ಪೂ. ಕಾಲೇಜಿನ ಸಂತೋಷಕುಮಾರ ರಾಠೋಡ, ಸ್ಥಳಿಯ ಸರ್ಕಾರಿ ಉರ್ದು ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಇಸಾಕಅಹ್ಮದ್​ ಸಾರವಾಡ, ಸರ್ಕಾರಿ ಕನ್ನಡ ಕನ್ನಡ ಗಂಡು ಮಕ್ಕಳ ಶಾಲೆ ಮುಖ್ಯಶಿಕ್ಷಕಿ ರಮಜಾನಬಿ ವಡಗೇರಿ ಅವರನ್ನು ಆಯ್ಕೆ ಮಾಡಲಾಗಿದೆ.

ಏಳಗಿ ಕನ್ನಡ ಭಾಷಾ ಶಿಕ್ಷಕ ಪರಶುರಾಮ ಬಗಲಿ, ಮಧಬಾವಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆರ್​.ಎಚ್​. ಶಂಶೋದ್ದೀನ್​, ತಿಕೋಟಾ ಸರ್ಕಾರಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಆನಂದ ಕುಂಬಾರ ಹಾಗೂ ಗುಣಕಿ ಸಿ.ಜಿ. ಪಾಟೀಲ ಪ್ರಾಥಮಿಕ ಮತ್ತು ವೀರರಾಣಿ ಕಿತ್ತೂರ ಚನ್ನಮ್ಮ ಪ್ರೌಢಶಾಲೆಯ ಅನುಪಮಾ ಪಿ. ಅವರನ್ನು ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.30 ರಂದು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ. ಮಾಧವ ಗುಡಿ, ಶಿಲ್ಪಾ ಭಸ್ಮೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net