ಚರಂತಿಮಠ ಶಾಲೆ ಮಕ್ಕಳು ರಾಷ್ಟ್ರೀಯ ಕರಾಟೆಗೆ ಆಯ್ಕೆ

26 Dwd 1 (karaate)
Published on

ಧಾರವಾಡ: ಇತ್ತೀಚೆಗೆ ಚಿತ್ರದುರ್ಗದಲ್ಲಿ ಜರುಗಿದ ೧೨ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ನಗರದ ಶ್ರೀಮತಿ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯ 9 ಮಕ್ಕಳು ರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ವೈಯಕ್ತಿಕ ಕಟಾ ವಿಭಾಗದಲ್ಲಿ ಸುಬಾನ್ ಧಾರವಾಡ ಪ್ರಥಮ ಸ್ಥಾನ ಪಡೆದಿದ್ದಾನೆ. ವೇದಾಂತ ಹಿರೇಮಠ ಹಾಗೂ ಸೊಹೈಲ್ ಅತ್ತಾರ ದ್ವಿತೀಯ ಸ್ಥಾನ ಹಂಚಿಕೊAಡಿದ್ದಾರೆ. ಆರುಷಿ ಕೇರಿಮಠ, ಅಭಿನವ ಹೂಲಿ, ಶಾನ್ ಸಂಗೊಳ್ಳಿ, ಮುಜಾಮಿಲ್ ಅತ್ತಾರ, ಲಕ್ಷಿ ಅಜಗೊಂಡ ಹಾಗೂ ಧರ್ಮೇಶ ಗಾಂಽ ತೃತೀಯ ಸ್ಥಾನ ಪಡೆದು ರಾಷ್ಟ್ರೀಯ ಪಂದ್ಯಾವಳಿಗೆ ಅರ್ಹತೆ ಸಂಪಾದಿಸಿದ್ದಾರೆ.
ವಿದ್ಯಾರ್ಥಿಗಳು ಕೋಚ್ ರಮೇಶ ಸೋಲಾಪುರ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅರುಣ ಚರಂತಿಮಠ, ಪ್ರಾಚಾರ್ಯೆ ಅಶ್ವಿನಿ ಚಿಕ್ಕಬಳ್ಳಾಪುರ, ಆಡಳಿತಾಽಕಾರಿ ಸೋಮೇಶ ಗಂಗಣ್ಣವರ ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net