ರಾಜ್ಯಮಟ್ಟದ ಬಾಸ್ಕೆಟ್​ಬಾಲ್​ಗೆ ಆಯ್ಕೆ

4manju3
Published on

ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ಬಾಲಕಿಯರ ಬಾಸ್ಕೆಟ್​ಬಾಲ್​ ಕ್ರೀಡಾಕೂಟದಲ್ಲಿ ಕೆಎಲ್​ಇ ರಾಜಾ ಲಖಮಗೌಡ ಪದವಿಪೂರ್ವ ವಿಾನ ಮಹಾವಿದ್ಯಾಲಯದ ವಿದ್ಯಾರ್ಥಿ ಸಾರಾ ಸಯ್ಯದ್​, ಮೇಶ್ರೀ ತಳವಾರ, ಶ್ರೇಯಾ ಮೇತ್ರಿ, ಲತಾ ಜಂಗಟಿ, ಅರ್ಪಿತಾ ಮಡಿವಾಳ, ಅಮತುಲ್ಲಾ ಬುಖಾರಿ, ಅಂಜನಾ ಗಸ್ತಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾಮಟ್ಟದ ಬಾಲಕರ ಬಾಸ್ಕೆಟ್​ ಬಾಲ್​ ಕ್ರೀಡಾಕೂಟದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅಶರ್​ ಖತೀಬ್​, ರಜತಸಿಂಗ್​ ಪಟೇಲ, ಚೈತನ್ಯ ತರಳೆ, ಪೃಥ್ವಿ ಶಿವಪೂಜಿಮಠ, ಸಾಗರ ನಿಲಗುಂದ, ಹರ್ಷ ಪಾಟೀಲ, ಆಯುಷ್​ ಚಿಕೋರ್ಡೆ, ಆರ್ಯನ್​, ಅಥರ್ವ ನಖಡಿ, ದರ್ಶನ ರನ್ನರ್ಸ್​ ಅಪ್​ ಆಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕೆಎಲ್​ಇ ಕಾರ್ಯಾಧ್ಯ ಡಾ.ಪ್ರಭಾಕರ ಕೋರೆ, ಉಪಪ್ರಾಚಾರ್ಯ ಡಾ.ಎಸ್​.ಎ.ಜವಳಿ, ಪ್ರಾಚಾರ್ಯ ವಿಶ್ವನಾಥ ಕಾಮಗೋಳ, ಡಾ.ಎಸ್.ಎ.ಮೋದಗಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net