ರಾಷ್ಟ್ರ ಮಟ್ಟದ ಸಿಟ್ಟಿಂಗ್ ಪ್ಯಾರಾಥ್ರೋಬಾಲ್ ತರಬೇತಿಗೆ ಆಯ್ಕೆ

26
Published on

ಮೈಸೂರು: ಪ್ಯಾರಾ ಥ್ರೋಬಾಲ್ ಫೆಡರೇಷನ್ ಆಫ್ ಇಂಡಿಯ ಮತ್ತು ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ವತಿಯಿಂದ ನಗರದಲ್ಲಿ ರಾಷ್ಟ್ರ ಮಟ್ಟದ ಸಿಟ್ಟಿಂಗ್ ಪ್ಯಾರಾಥ್ರೋಬಾಲ್ ತರಬೇತಿ ಮತ್ತು ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿತ್ತು.

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಮಾ. 26 ಹಾಗೂ 27 ರಂದು ನಗರದಲ್ಲಿ ಆಯೋಜಿಸಲಿರುವ ರಾಷ್ಟ್ರ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಗೆದ್ದ ತಂಡವು ನೇರವಾಗಿ ಕಾಂಬೋಡಿಯದಲ್ಲಿ ಆಯೋಜಿಸಲಿರುವ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸುವರು.

ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ವತಿಯಿಂದ ಸಂಪೂರ್ಣವಾಗಿ ಕ್ರೀಡಾಕೂಟ ಮತ್ತು ಸಭಾ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ರೀತಿಯ ಸಂಪನ್ಮೂಲ ಒದಗಿಸಿಕೂಡಲಾಗುತ್ತದೆ.

ರೋಟರಿ ಕ್ಲಬ್‌ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷ ಆರ್.ರಾಜೇಶ್ ಅವರು ಎಲ್ಲ ಕ್ರೀಡಾಪಟುಗಳಿಗೆ ಪ್ರೋತ್ಸಾಹ ತುಂಬುವ ಮೂಲಕ ಶುಭ ಹಾರೈಸಿದರು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಕ್ಲಬ್‌ನ ಸರ್ವ ಸದಸ್ಯರಿಗೆ ಧನ್ಯವಾದ ತಿಳಿಸಿದರು.

ಕ್ಲಬ್‌ನ ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್, ಪ್ಯಾರಾಥ್ರೋ-ಬಾಲ್ ಫೆಡರೇಷನ್ ಆಫ್ ಇಂಡಿಯಾದ ಚೇರ್ಮನ್ ಆಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಭಾರತದ ಪ್ಯಾರಾಒಲಿಂಪಿಕ್ ಸಮಿತಿ(ಪಿಟಿಎಫ್‌ಐ) ಅಧ್ಯಕ್ಷ ಎಂ.ಮಹದೇವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ಕ್ಲಬ್ ಆಫ್ ಹೆರಿಟೇಜ್‌ನ ಸಂಸ್ಥಾಪಕ ಅಧ್ಯಕ್ಷ ಕೆ.ಮಂಜುನಾಥ್, ಮಾಜಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪಿಟಿಎಫ್‌ಐ ಜಿ.ಎಂ.ಸುರೇಶ್, ರೋಟರಿ ಮೈಸೂರು ಅಂಬಾರಿ ಅಧ್ಯಕ್ಷ ಯದುಕೃಷ್ಣ ಇತರರು ಇದ್ದರು. ರೋಟರಿ ಕ್ಲಬ್ ಆಫ್ ಹೆರಿಟೇಜ್‌ನ ಅಧ್ಯಕ್ಷ ಆರ್.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಸಂಸ್ಥೆಯ ಆರ್.ರಾಮಚಂದ್ರ, ಮಂಜುನಾಥ್, ಗೌರವ್ ಜಿ.ಶರ್ಮ ಎಚ್.ಎಂ.ವೆಂಕಟೇಶ್, ಮಧುಸೂದನ್, ಶಿವಕುಮಾರ್, ಸುಂದರರಾಜ, ಜಗದೀಶ್‌ಗೌಡ, ರಾಘವೇಂದ್ರ ಆಚಾರ್ ಇತರರು ಸಹಾಯಹಸ್ತ ಚಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net