ಆದಿತ್ಯ ಸದಾನಂದ ಪೂಜಾರಿ ರಾಷ್ಟ್ರಮಟ್ಟಕ್ಕೆ

adithya
ಆದಿತ್ಯ
Published on

ಕೋಟ: ಇಲ್ಲಿನ ಕೋಟದ ಗಿಳಿಯಾರು ಗ್ರಾಮದ ಆದಿತ್ಯ ಸದಾನಂದ ಪೂಜಾರಿ ಇತ್ತೀಚೆಗೆ ಸಾಲಿಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಬೆಂಚ್‌ಪ್ರೆಸ್‌ನಲ್ಲಿ 93 ಕೆ.ಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್18 ಮತ್ತು 19ರಂದು ಗೋವಾದಲ್ಲಿ ನಡೆಯುವ ರಾಷ್ಟ್ರಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರು ಕೋಟದ ವಿವೇಕ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ಶೋಭಾ ಸದಾನಂದ ಪೂಜಾರಿ ಅವರ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net