ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆ

Selected for Mysore Dasara Poet's Festival
Published on

ಬ್ಯಾಡಗಿ: ಮೈಸೂರಿನ ದಸರಾ ಉತ್ಸವದ ಕವಿಗೋಷ್ಠಿಗೆ ಬ್ಯಾಡಗಿ ಶಿಕ್ಷಕಿ ಹಾಗೂ ಸಾಹಿತಿ ಶಕುಂತಲಾ ದಾಳೇರ ಆಯ್ಕೆಯಾಗಿದ್ದಾರೆ.

ಸೆ. 27ರಂದು ಬಿ.ಎಂ. ಶ್ರೀ ಕುವೆಂಪು ಅಧ್ಯಯನ ಸಂಸ್ಥೆ ಮಾನಸ ಗಂಗೋತ್ರಿಯಲ್ಲಿ ಕವಿಗೋಷ್ಠಿ ಆಯೋಜಿಸಲಾಗಿದೆ. ಸ್ಥಳೀಯ ಕೋಳೂರು ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಸಾಹಿತಿ ಶಂಕುಂತಲಾ ದಾಳೇರ ಅವರು ಹಲವು ಕವಿತೆ, ಪುಸ್ತಕ ರಚಿಸಿದ್ದಾರೆ. ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡು ಜಿಲ್ಲೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಶಕುಂತಲಾ ಅವರ ಸಾಧನೆ ಗುರುತಿಸಿ ಸನ್ಮಾನಿಸಲಾಗಿದೆ. ದಸರಾ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿರುವುದು ಹಾವೇರಿ ಜಿಲ್ಲೆಯ ಸಾಹಿತ್ಯಲೋಕದ ಗರಿಮೆ ಇನ್ನಷ್ಟು ಹೆಚ್ಚಿದಂತಾಗಿದೆ. ಇಂತಹ ಹೊಸಲೋಕದ, ಗಟ್ಟಿಧ್ವನಿ ಕವನ ರಚಿಸುವ ಕವಯತ್ರಿಗಳಿಗೆ ಅವಕಾಶ ದೊರೆತಿರುವುದು ಹೆಮ್ಮೆ ಎನಿಸಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net