

ಧಾರವಾಡ: ಹುಬ್ಬಳ್ಳಿಯ ಕರ್ನಾಟಕ ಮಲ್ಲಕಂಬ ಅಕಾಡೆಮಿಯಿಂದ ತರಬೇತಿ ಪಡೆದ ಬಿಳೇನಿಸಿದ್ದ ಸಮಗಾರ ಮತ್ತು ಪ್ರಕಾಶ ಮಂಜಪ್ಪ ನಾವಿ, 2 ಬಾರಿಗೆ ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದಾರೆ. ಅ. 24ರಿಂದ 27ರವರೆಗೆ ಚೆನ್ನೈನಲ್ಲಿ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ. ಕ್ರೀಡಾಪಟುಗಳನ್ನು ಅಕಾಡೆಮಿಯ ಸಂಸ್ಥಾಪಕ ಮತ್ತು ಮುಖ್ಯ ತರಬೇತುದಾರ ಸಂತೋಷ ಸಣತಂಗಿ, ಸಹ ತರಬೇತುದಾರರಾದ ಶಿವು ಮತ್ತು ಮಾರುತಿ ಅಭಿನಂದಿಸಿದ್ದಾರೆ.