

ಕಡಬ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆ. 24ರಿಂದ 30ರ ತನಕ ನಡೆಯಲಿರುವ 3ನೇ ಮಿನಿ ಒಲಂಪಿಕ್ ಕಬಡ್ಡಿ ಚಾಂಪಿಯನ್‌ಷಿಪ್‌ಗೆ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಧನ್ವಿ ಎಂ ಹಾಗೂ ಸಮರ್ಥ್ ಆಯ್ಕೆಯಾಗಿದ್ದಾರೆ.
ಡಿಪಾರ್ಟ್‌ಮೆಂಟ್ ಆಫ್ ಯೂತ್ ಎಂಪವರ್‌ಮೆಂಟ್ ಆ್ಯಂಡ್ ಸ್ಪೋರ್ಟ್ಸ್, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣಲ್ಲಿ ಮಿನಿ ಒಲಂಪಿಕ್ ನಡೆಯಲಿದೆ. ಧನ್ವಿ ಕೊಣಾಜೆ ಮಣೆಜಾಲು ದುಗ್ಗಣ್ಣಗೌಡ ಮತ್ತು ಅಮಿತಾ ದಂಪತಿ ಪುತ್ರಿಯಾಗಿದ್ದು, ಸಮರ್ಥ್ ಹಳಿಂಗಳಿ ಬಾಹುಬಲಿ ಯಲ್ಲಟ್ಟಿ ಹಾಗೂ ಶೋಭಾ ಯಲ್ಲಟ್ಟಿ ದಂಪತಿ ಪುತ್ರ. ಮುಖ್ಯಶಿಕ್ಷಕ ಸತೀಶ್ ಭಟ್ ಹಾಗೂ ದೈಹಿಕ ಶಿಕ್ಷಕಿ ಪ್ರಫುಲ್ಲಾ ರೈ ಮಾರ್ಗದರ್ಶನದಲ್ಲಿ ಮಾಧವ ಬಿ ಕೆ, ಜಸ್ವಂತ್ ಹಾಗೂ ಮಂಜುನಾಥ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.