

ವಿಜಯವಾಣಿ ಸುದ್ದಿಜಾಲ ಧಾರವಾಡ
ಜವಾಹರ ನವೋದಯ ಶಾಲೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಗರದ ದೊಡಮನಿ ಸೈನಿಕ ನವೋದಯ ಕೋಚಿಂಗ್ ಕ್ಲಾಸಸ್‌ನ ಶ್ರೇಯಸ್ ಗಣಾಚಾರಿ, ವೀರ ರಾಥೋಡ್, ಸಮರ್ಥ ಬೀರನೂರು, ದೀಕ್ಷಾ ಕೋಲಕಾರ, ಸಂಸ್ಕೃತಿ ಜಾಯಿ, ಅನನ್ಯ ಕಟ್ಟಿ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಬಿ. ದೊಡಮನಿ ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.