ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

IMG_20241203_191556_433.jpg
Published on

ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದ ನಿವಾಸಿ ಡಾ. ಶ್ರೀಧರ ಹೊಸಮನಿ ಅವರು ಶಿವಮೊಗ್ಗದಲ್ಲಿ ವರ್ಷಿಣಿ ಯೋಗ ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ 7ನೇ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 2 ನೇ ಸ್ಥಾನ ಪಡೆದಿದ್ದಾರೆ.

31ರಿಂದ 40ವರ್ಷದ ವಯೋಮಿತಿಯಲ್ಲಿ ಭಾಗವಹಿಸಿದ್ದ ಇವರು ಈ ಸಾಧನೆ ಮಾಡಿ ಥೈಲ್ಯಾಂಡ್ ನಲ್ಲಿ ನಡೆಯುವ 6ನೇ ಅಂತಾರಾಷ್ಟ್ರೀಯ ಯೋಗಾ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net