

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ಸರ್ಕಾರ ಏರ್ಪಡಿಸಿದ್ದ ಇನ್ಸ್ಪೈರ್ ಅವಾರ್ಡ್ಗೆ ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಕೇಂದ್ರದ ವಿದ್ಯಾರ್ಥಿಗಳಾದ ರತನ್ ನಾಯಕ, ವಿನಯಗೌಡ ಪಾಟೀಲ, ಅಭಿರಾಜ್ ಬೆಟಗೇರಿ ಹಾಗೂ ರಾಮಲಿಂಗ ನೇಗಿನಹಾಳ ಆಯ್ಕೆಯಾಗಿದ್ದಾರೆ. ಮುಂದಿನ ಕಾರ್ಯ ಯೋಜನೆಗೆ ತಲಾ 10 ಸಾವಿರ ರೂ. ಬಹುಮಾನ ಪಡೆದಿದ್ದು, ವಿದ್ಯಾರ್ಥಿಗಳ ಸಾಧನೆಗೆ ರಾಷ್ಟ್ರೊತ್ಥಾನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.