ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಗಾಂಧಿ ಶಿವಣ್ಣ ಮತ್ತು ಉಪಾಧ್ಯಕ್ಷರಾಗಿ ಪುಟ್ಟೇಗೌಡ ಅವಿರೋಧ ಆಯ್ಕೆಯಾದರು. ಜಿ.ಎನ್.ಸುಬ್ಬೇಗೌಡ, ನಿಂಗರಾಜು, ಜಿ.ಎಸ್.ಶಿವಣ್ಣ, ಜಿ.ಸಿ.ಮಹದೇವ, ಸಣ್ಣಸ್ವಾಮಿ, ಭಾಗ್ಯಮ್ಮ, ಜಯಮ್ಮ, ಜಯರಾಮಜೋಗಿ, ಜಿ.ಕೆ.ಮಹದೇವ್ ಇದ್ದರು.
ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಗಾಂಧಿ ಶಿವಣ್ಣ ಮತ್ತು ಉಪಾಧ್ಯಕ್ಷರಾಗಿ ಪುಟ್ಟೇಗೌಡ ಅವಿರೋಧ ಆಯ್ಕೆಯಾದರು. ಜಿ.ಎನ್.ಸುಬ್ಬೇಗೌಡ, ನಿಂಗರಾಜು, ಜಿ.ಎಸ್.ಶಿವಣ್ಣ, ಜಿ.ಸಿ.ಮಹದೇವ, ಸಣ್ಣಸ್ವಾಮಿ, ಭಾಗ್ಯಮ್ಮ, ಜಯಮ್ಮ, ಜಯರಾಮಜೋಗಿ, ಜಿ.ಕೆ.ಮಹದೇವ್ ಇದ್ದರು.
Published on

ಕೆ.ಆರ್.ನಗರ: ತಾಲೂಕಿನ ಗಂಧನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 3ನೇ ಅವಧಿಗೆ ಅಧ್ಯಕ್ಷರಾಗಿ ಗಾಂಧಿ ಶಿವಣ್ಣ ಮತ್ತು ಉಪಾಧ್ಯಕ್ಷರಾಗಿ ಪುಟ್ಟೇಗೌಡ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆಡಳಿತ ಮಂಡಳಿಯ 12 ಸ್ಥಾನಗಳಲ್ಲಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ ಬಿಗೆ ಮೀಸಲಾಗಿದ್ದ ಎರಡು ಸ್ಥಾನ ಹೊರತುಪಡಿಸಿ ಉಳಿದ 10 ಸ್ಥಾನಗಳಿಗೆ ಡಿ.29 ರಂದು ನಡೆದಿದ್ದ ಚುನಾವಣೆಯಲ್ಲಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿತ್ತು. ಶುಕ್ರವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಕಟ್ಟಡದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಶಿವಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟೇಗೌಡ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಬಿ.ರಾಜು ಕರ್ತವ್ಯ ನಿರ್ವಹಿಸಿದರು. ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಜಿ.ಎನ್.ಸುಬ್ಬೇಗೌಡ, ನಿಂಗರಾಜು, ಜಿ.ಎಸ್.ಶಿವಣ್ಣ, ಜಿ.ಸಿ.ಮಹದೇವ, ಸಣ್ಣಸ್ವಾಮಿ, ಭಾಗ್ಯಮ್ಮ, ಜಯಮ್ಮ, ಜಯರಾಮಜೋಗಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಕೆ.ಮಹದೇವ್, ಕಚೇರಿ ಸಿಬ್ಬಂದಿ ಜಿ.ಎಸ್.ವಿಶ್ವನಾಥ್, ಜಿ.ಆರ್.ಗಣೇಶ್, ಅಭಿಷೇಕ್ ಇದ್ದರು.

ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಗ್ರಾಪಂ ಅಧ್ಯಕ್ಷೆ ಮಹದೇವಿ, ಉಪಾಧ್ಯಕ್ಷ ಜಿ.ಆರ್.ಲೋಕೇಶ್, ತಾಪಂ ಮಾಜಿ ಸದಸ್ಯ ಜಿ.ಎಸ್.ಮಂಜುನಾಥ್, ಮಾಜಿ ಪ್ರಧಾನರಾದ ಚಿಕ್ಕೇಗೌಡ, ಮಾಜಿ ಚೇರ‌್ಮನ್ ಯೋಗೇಶ್, ಅಂಗಡಿ ಶಿವಣ್ಣ, ಮರಿಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net