

ಹಲಗೂರು: ಹಲಗೂರು:ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚಿಗೆ ಮಳವಳ್ಳಿ ಪಟ್ಟಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 16 ವರ್ಷ ವಯೋಮಾನದ ಕ್ರೀಡಾಕೂಟದಲ್ಲಿ ಜೆ.ಜೆ.ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲೆ ಕೆ.ಎನ್.ಲಲಿತಾಂಬಾ ಸೋಮಶೇಖರ್ ತಿಳಿಸಿದರು.
100 ಮೀಟರ್ ಓಟ, ಉದ್ದ ಜಿಗಿತ ಸ್ಪರ್ಧೆಯಲ್ಲಿ ಮೊಹಮ್ಮದ್ ಶಾಹಿದ್ ಪ್ರಥಮ, ಗುಂಡು ಎಸೆತದಲ್ಲಿ ದ್ವೀತಿಯ, ಉದ್ದ ಜಿಗಿತದಲ್ಲಿ ಧನುಶ್ರೀ (ಪ್ರ), ಉದ್ದ ಜಿಗಿತ ಮತ್ತು ಜಾವಲಿನ್ ಪ್ರೀತಮ್ ಗೌಡ (ದ್ವೀ), ಎತ್ತರ ಜಿಗಿತದಲ್ಲಿ ಎಸ್.ಕೆ.ಮೋಹನ್ (ದ್ವೀ), ಜಾವಲಿನ್ ಎಸೆತದಲ್ಲಿ ಅಹಲ್ಯಾ (ದ್ವೀ), 100 ಮೀಟರ್ ಓಟದಲ್ಲಿ ದೀಪಿಕಾ (ದ್ವೀ), 400 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಸ್ಮಿತಾ (ದ್ವೀ), 100 ಮೀಟರ್ ಓಟದಲ್ಲಿ ಚಂಪಕಾ (ದ್ವೀ), 600 ಮೀ. ಓಟದಲ್ಲಿ ತೇಜಶ್ವಿನಿ (ತೃ) ಸ್ಥಾನ ಪಡೆದಿದ್ದಾರೆ.
ಯೋಗೇಶ್ವರ್ ಎಸ್.ಮೂರ್ತಿ, ಮೊಹಮ್ಮದ್ ಶಾಹಿದ್, ಎಲ್.ಆರ್.ತರುಣ್, ಯಶಸ್ 100 ಮೀ. ರೀಲೆಯಲ್ಲಿ ಪ್ರಥಮ ಸ್ಥಾನ, ಕೆ.ಎಸ್.ಧ್ರುವ, ಆರ್.ಮೋಹಿತ್ ಗೌಡ, ಚೇತನ್, ಮೋಹಿತ್ 400 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ, 100 ಮೀಟರ್ ರೀಲೆಯಲ್ಲಿ ಶಿವಾನಿ, ಸಂಯೋಗ, ವಿಸ್ಮಿತಾ, ದೀಪಿಕಾ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ವಳ್ಳಳ್ಳಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಜೆ.ಸೋಮಶೇಖರ್, ಪ್ರಾಂಶುಪಾಲೆ ಕೆ.ಎನ್.ಲಲಿತಾಂಬಾ, ಸಂಯೋಜಕ ವಿಕಾಶ್, ದೈಹಿಕ ಶಿಕ್ಷಣ ತರಬೇತುದಾರ ರಾಜಶೇಖರ ಮೂರ್ತಿ ಸೇರಿದಂತೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.