

ಸಂಡೂರು: ತೋರಣಗಲ್ಲಿನ ಸರ್ಕಾರಿ ಪ್ರೌಢಶಾಲೆ ಒಳಾಂಗಣ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಬಾಲಕರ ವಿಭಾಗದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ತೋರಣಗಲ್ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಭೀಮ್, ಚರಣ್ ಕುಮಾರ್, ಪ್ರಶಾಂತ್, ದರ್ಶನ್, ಯು.ವಿನಯ್ ಕುಮಾರ, ವಿನಯ್ ಕುಮಾರ, ಸಿದ್ದಾರ್ಥ್, ತೇಜಸ್ ಹಾಗೂ ಬಾಲಕಿಯರ ವಿಭಾಗದಲ್ಲಿ ಸ್ಪಂದನಾ, ಮಂಜುಳಾ, ಗಗನಶ್ರೀ, ಬಿಂದು, ಚಲವಾದಿ ಮಂಜುಳಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.