

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಧ ಶಾಲೆಗಳ ಶಿಕ್ಷಕರನ್ನು 2024- 25ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಿರಿಯ ಪ್ರಾಥಮಿಕ ವಿಭಾಗ: ಧಾರವಾಡ ಶಹರದ ಕಾಮನಕಟ್ಟಿಯ ಶಾಲೆ. ನಂ. 14ರ ಪ್ರಭಾವತಿ ನಿಂಬನಗೌಡರ, ಧಾರವಾಡ ತಾಲೂಕು ನರೇಂದ್ರ ಶಾಲೆಯ ಶೌಕತಲಲಿ ಮೆಣಸಗಿ, ಹುಬ್ಬಳ್ಳಿ ನೇಕಾರನಗರ ಶಾಲೆಯ ಲಕ್ಷ್ಮೀದೇವಿ ಕೊನಾ, ಹುಬ್ಬಳ್ಳಿ ತಾಲೂಕು ಛಬ್ಬಿ ಶಾಲೆಯ ಅನ್ನಪೂರ್ಣಾ ಶಿರೂರು, ಕುಂದಗೋಳ ತಾಲೂಕು ಹಿರೇಹರಕುಣಿ ಶಾಲೆಯ ಶ್ರೀದೇವಿ ಬಾಗೆವಾಡಿ, ಕಲಘಟಗಿ ತಾಲೂಕು ಸೋಮನಕೊಪ್ಪ ಶಾಲೆಯ ಶಿವಪ್ಪ ಧನಿಗೊಂಡ ಹಾಗೂ ನವಲಗುಂದ ತಾಲೂಕು ಕುಮಾರಗೊಪ್ಪ ಶಾಲೆಯ ರೇಣುಕಾ ಪಾತ್ರದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗ: ಧಾರವಾಡ ಶಹರ ಗಾಂಧಿನಗರ ಶಾಲೆಯ ಬಸವರಾಜ ಗೊರವರ, ಧಾರವಾಡ ತಾಲೂಕು ವರವನಾಗಲಾವಿಯ ಮಲ್ಲಮ್ಮ ಪಟ್ಟಿಟ್ಟಿ, ಹುಬ್ಬಳ್ಳಿ ಶಹರದ ನವಆನಂದನಗರ ಶಾಲೆಯ ವಿದ್ಯಾ ಧೋಂಗಡಿ, ಹುಬ್ಬಳ್ಳಿ ತಾಲೂಕು ಗೋಪನಕೊಪ್ಪ ಶಾಲೆಯ ಅಣ್ಣಪ್ಪ ಮರಿಹುಚ್ಚಣ್ಣವರ, ಕುಂದಗೋಳ ತಾಲೂಕು ಕೊಡ್ಲಿವಾಡ ಶಾಲೆಯ ಎಸ್.ಬಿ. ಕಬನೂರ, ಕಲಘಟಗಿ ತಾಲೂಕು ಪರಸಾಪುರ ಶಾಲೆಯ ಅಶೋಕ ಖೋಡಕಿ, ನವಲಗುಂದ ತಾಲೂಕು ಮಣಕವಾಡ ಶಾಲೆಯ ಮುಖ್ಯ ಶಿಕ್ಷಕ ಬಿ.ವಿ. ಅಂಗಡಿ ಆಯ್ಕೆಯಾಗಿದ್ದಾರೆ.
ಪ್ರೌಢ ವಿಭಾಗ: ಧಾರವಾಡ ಶಹರ ಗಾಂಽನಗರ ಶಾಲೆಯ ಎನ್.ಎಸ್. ಖವಟಕೊಪ್ಪ, ಧಾರವಾಡ ತಾಲೂಕು ಹೆಬ್ಬಳ್ಳಿ ಶಾಲೆಯ ಸಂಜೀವ ಕುಂದಗೋಳ, ಹುಬ್ಬಳ್ಳಿ ಶಹರ ವಿಶ್ವೇಶ್ವರನಗರ ಶಾಲೆಯ ಎಸ್.ಆರ್. ಶೀಲವಂತರ, ಹುಬ್ಬಳ್ಳಿ ತಾಲೂಕು ಗೋಕುಲದ ಶ್ರೀಗುರು ಗೋರಕ್ಷನಾಥ ಪ್ರೌಢಶಾಲೆ ದೈಹಿಕ ಶಿಕ್ಷಕ ನಂದೀಶ ಎನ್. ದಳವಾಯಿ, ಕುಂದಗೋಳ ತಾಲೂಕು ಯರಗುಪ್ಪಿ ಶಾಲೆಯ ಸುಜಾತಾ ಪಾಳೇದ, ಕಲಘಟಗಿ ತಾಲೂಕು ದೇವಿಕೊಪ್ಪ ಶಾಲೆಯ ನಾಗಪ್ಪ ಮನ್ನಿಕೇರಿ ಹಾಗೂ ನವಲಗುಂದ ತಾಲೂಕು ಮಣಕವಾಡ ಶಾಲೆಯ ಶಿಲ್ಪಾ ಯಾಳಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.