

ಧಾರವಾಡ: ಬಿಹಾರದ ಪಾಟ್ನಾದಲ್ಲಿ ಜ. ೧೬ರಿಂದ ೨೩ರವರೆಗೆ ನಡೆಯುವ ೬೭ನೇ ರಾಷ್ಟಿçÃಯ ೧೭ ವಯೋಮಿತಿಯ ಬಾಲಕರ ಕ್ರಿಕೆಟ್ ಪಂದ್ಯಾವಳಿಗೆ ರಾಜ್ಯದ ೧೬ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ತಂಡದÀಲ್ಲಿ ಉತ್ತರ ಕರ್ನಾಟಕ ಭಾಗದ ಬೆಳಗಾವಿಯ ಅಶುತೋಷ ಹಿರೇಮಠ, ಎ. ಶ್ರೇಯಸ್, ಸ್ವರೂಪ ಸಾಳುಂಕೆ, ಹುಬ್ಬಳ್ಳಿಯ ವಿಜಯ ಬಂಡಿ, ಧಾರವಾಡದ ಸುಜಯï ಕೋರವರ ಸ್ಥಾನ ಪಡೆದಿದ್ದಾರೆ.
ಸುಜಯ್ ಕೊರವರ ಧಾರವಾಡದ ಮೌಲಾನಾ ಆಜಾದ್ ಮÁದರಿ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿ ಹಾಗೂ ವಿಜಯ ಬಂಡಿ ಹುಬ್ಬಳ್ಳಿ ರೋಟರಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ (ದೈಹಿಕ ಶಿಕ್ಷಣ) ಸಹ ನಿರ್ದೇಶಕ ಎಸ್.ಎನ್. ರಮೇಶ ತಿಳಿಸಿದ್ದಾರೆ.
ಸುಜಯ್ ಧಾರವಾಡದ -Àಸ್ಟ್ ಕ್ರಿಕೆಟ್ ಅಕಾಡೆಮಿಯ ಸಂದೀಪ್ ಪೈ ಅವರ ವಿದ್ಯಾರ್ಥಿಯಾಗಿದ್ದು, ಸದ್ಯ ಬೆಂಗಳೂರಿನ ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮÁಡುತ್ತಿದ್ದಾನೆ.