

ಬೆಳಗಾವಿ: ನಗರದ ಕೆಎಲ್‌ಎಸ್ ಗೋಗಟೆ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಈಚೆಗೆ ಆಯೋಜಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಾಕಿ ತಂಡದ ಆಯ್ಕೆಯ ಪಂದ್ಯಾವಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡು ಉತ್ತಮ ಸಾಧನೆ ಮಾಡಿ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ನಿಕಿತಾ ಕಾವಳೇಕರ, ಕಾವ್ಯ ಬಡಿಗೇರ, ತ್ರಿವೇಣಿ ಬಡಕನ್ನವರ, ಪುರುಷರ ವಿಭಾಗದಲ್ಲಿ ಅಭಿಷೇಕ ಕೊಂಕಣಿ, ಸಮೀರ್ ದೇಸಾಯಿ, ಸುನೀಲ್ ಮತ್ತಿಕೊಪ್ಪ ಬ್ಲೂ ಆಗಿ ಆಯ್ಕೆ ಆಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಎಂ.ಜಿ. ಹೆಗಡೆ, ದೈಹಿಕ ಶಿಕ್ಷಣ ನಿರ್ದೇಶಕಿ ರೇಣುಕಾ ಜುಂಜುವಾಡಕರ, ತರಬೇತುದಾರ ಡಾ. ಗಿರಿಜಾಶಂಕರ ಮಾನೆ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.