

ಯಳಂದೂರು: ಪಟ್ಟಣದ ಬಳೇಪೇಟೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ. ರಾಜಶೇಖರ್, ಉಪಾಧ್ಯಕ್ಷರಾಗಿ ಸಿ. ಬಾಬುಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎಂ.ರಾಜಶೇಖರ್, ಉಪಾಧ್ಯಕ್ಷ ಸ್ಥಾನಕ್ಕೆ ಸಿ. ಬಾಬುಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಿಡಿಒ ಎಸ್. ಸುಭಾಷಿಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಸಂಘದ ನಿರ್ದೇಶಕ ವೈ.ಎಸ್.ನಂಜಶೆಟ್ಟಿ, ಪಿ.ಮಾದೇಶ್, ಬಿ. ಮಲ್ಲಿಕಾರ್ಜುನಸ್ವಾಮಿ, ಎಂ. ಅನಿಲ್, ಎ. ರವಿ, ನಿಂಗರಾಜು, ವೈ.ಎಂ. ಜಯರಾಮು, ವೈ.ಬಿ.ಮಹೇಶ್ ಎಸ್. ರಾಜಮ್ಮ, ಪುಟ್ಟಚಾಮಮ್ಮ, ಸಿಇಒ ಎಸ್. ಪುಟ್ಟರಾಜು, ಡಿ.ಪಿ.ರವಿಕುಮಾರ್, ಎಸ್. ರಾಕೇಶ್, ಕೆ.ಶಿವಕುಮಾರ್ ಇದ್ದರು.