ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

IMG_20230913_211504_970-1.jpg
Published on

ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಎನ್ಎಲ್ಇ ಸೊಸೈಟಿಯ ಡಾ. ಆರ್.ಬಿ. ಪಾಟೀಲ ಮಹೇಶ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಅರ್ಹನ್ ಪತ್ರಾವಳಿ ಮತ್ತು ಸತ್ಯನಾರಾಯಣ ಮುಳಗುಂದ ಕರಾಟೆಯ ವಿವಿಧ ತೂಕದ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ಶ್ರೇಯಾ ಇಂಗಳೆ ಬಾಲಕೀಯರ ವಿಭಾಗದ ಕರಾಟೆಯಲ್ಲಿ ದ್ವೀತಿಯ ಸ್ಥಾನ ಪಡೆದು ರಜತ ಪದಕ ಪಡೆದಿದ್ದಾರೆ.

ವಿದ್ಯಾಥಿರ್ಗಳ ಸಾಧನೆಗೆ ಸೊಸೈಟಿ ಅಧ್ಯ ಡಾ. ಪಿ.ವಿ. ದತ್ತಿ, ಗೌರವ ಕಾರ್ಯದರ್ಶಿ ರಾಜಾ ದೇಸಾಯಿ, ಜಂಟಿ ಕಾರ್ಯದರ್ಶಿ ಡಾ. ಬಿ.ಆರ್. ಪಾಟೀಲ್, ಪ್ರಾಚಾರ್ಯ ರಾಮ ಮೋಹನ ಎಚ್.ಕೆ. ಸಂತಸ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಕ್ರೀಡಾ ನಿರ್ದೇಶಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಐ.ಎಸ್. ಹಿರೇಮಠ ಮಾರ್ಗದರ್ಶನ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net