ಐಸಿಎಸ್ ಮಹೇಶ ಕಾಲೇಜಿನ ವಿದ್ಯಾರ್ಥಿನಿ ಐಐಐಟಿಗೆ ಆಯ್ಕೆ

IMG_20230824_205555_324.jpg
Published on

ಧಾರವಾಡ: ಇಲ್ಲಿಯ ಹಳಿಯಾಳ ರಸ್ತೆಯಲ್ಲಿರುವ ಐಸಿಎಸ್ ಮಹೇಶ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಚೈತ್ರಾ ಕಟ್ಟಿಮನಿ ಅವರು ಧಾರವಾಡ ಐಐಐಟಿಗೆ ಆಯ್ಕೆಯಾಗಿದ್ದಾರೆ.

ಐಐಐಟಿಯಲ್ಲಿ ದತ್ತಾಂಶ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಚೈತ್ರಾ ಅಧ್ಯಯನ ಮಾಡಲಿದ್ದಾರೆ.

ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥ ಬಸವರಾಜ ರೇವಡಿಗಾರ, ಡಾ. ಗೌರಿ ಜೋಶಿ, ಪ್ರಾಚಾರ್ಯ ಬಿ.ಸಿ. ಪಾಟೀಲ, ಆಡಳಿತಾಧಿಕಾರಿ ಬಸವಕಿರಣ ಜೆ.ಎಚ್., ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net