ಕೋಳಿ ಅಂಗಡಿಯಿಂದ ಕಾಡುಹಂದಿ ಮಾಂಸ ವಶ

Wild Boar
Published on

ಕಾಸರಗೋಡು: ಕೋಳಿ ಮಾರಾಟದಂಗಡಿಯಲ್ಲಿ ಅನಧಿಕೃತವಾಗಿ ಕಾಡುಹಂದಿ ಮಾಂಸ ದಾಸ್ತಾನಿರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಚೆರ್ವತ್ತೂರು ಕೊವ್ವಲ್ ಪುದಿಯಕಂಡ ರಸ್ತೆ ಸನಿಹದ ಚಿಕನ್‌ಸ್ಟಾಲ್ ಅಂಗಡಿ ಮಾಲೀಕ, ರಾಮಂಚಿರ ನಿವಾಸಿ ಕೆ.ಸುರೇಶ್ ಹಾಗೂ ಈತನ ಸ್ನೇಹಿತ ಎ.ರಂಜಿತ್ ಕುಮಾರ್ ಬಂಧಿತರು.

ಚಿಕನ್‌ಸ್ಟಾಲ್‌ನಲ್ಲಿ ಕಾಡುಹಂದಿಯ ಪದಾರ್ಥ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಾಡುಹಂದಿ ಮಾಂಸ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net