ದಾಖಲೆಗಳಿಲ್ಲದ ಆಟೋಗಳ ವಶ

Untitled-2
ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್​ ವೃತ್ತದಲ್ಲಿ ನಗರ ಠಾಣೆ ಸಬ್​ ಇನ್​ಸ್ಪೆಕ್ಟರ್​ ಕೃಷ್ಣಪ್ಪ ಆಟೋಚಾಲಕರಿಂದ ಮಾಹಿತಿ ಪಡೆಯುತ್ತಿರುವುದು.
Published on

ದೊಡ್ಡಬಳ್ಳಾಪುರ: ಪರ್ಮಿಟ್​, ಇನ್ಶೂರೆನ್ಸ್​, ಫಿಟ್​ ನೆಸ್​ ಸರ್ಟಿಫಿಕೆಟ್​ ಸೇರಿ ಡಿಎಲ್​ ದಾಖಲೆಗಳಿಲ್ಲದೆ ರಸ್ತೆಗಿಳಿದಿದ್ದ ಪ್ಯಾಸೆಂಜರ್​ ಆಟೋಗಳನ್ನು ನಗರ ಪೊಲೀಸ್​ ಇನ್​ಸ್ಪೆಕ್ಟರ್​ ಅಮರೇಶ್​ಗೌಡ ಸೂಚನೆ ಮೇರೆಗೆ ಸಬ್​ ಇನ್​ಸ್ಪೆಕ್ಟರ್​ ಕೃಷ್ಣಪ್ಪ ನೇತೃತ್ವದಲ್ಲಿ ನಗರದ ಡಿ.ಕ್ರಾಸ್​ ಬಳಿ ಗುರುವಾರ ಆಟೋಗಳ ಪರಿಶೀಲನೆ ಮಾಡಲಾಯಿತು.

ಪರ್ಮಿಟ್​, ಇನ್ಶೂರೆನ್ಸ್​, ಫಿಟ್​ ನೆಸ್​ ಸರ್ಟಿಫಿಕೆಟ್​ ಸೇರಿ ಏನೂ ದಾಖಲೆ ಇಲ್ಲದ ಆಟೋಗಳನ್ನು ಸದ್ಯ ವಶಕ್ಕೆ ಪಡೆಯಲಾಯಿತು. ಈ ವೇಳೆ ಮಾಹಿತಿ ನೀಡಿದ ಇನ್​ಸ್ಪೆಕ್ಟರ್​ ಅಮರೇಶ್​ ಗೌಡ, ಆಟೋ ರಿಾಗಳು ಯಾವುದೇ ಪರ್ಮಿಟ್​ ಇಲ್ಲದೆ, ಕಾನೂನು ಬಾಹಿರವಾಗಿ ಸಂಚರಿಸುತ್ತಿವೆ. ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವುದು, ಎಲ್ಲೆಂದರಲ್ಲಿ ಏಕಾಏಕಿ ನಿಲ್ಲಿಸುವ ಮೂಲಕ ಸಂಚಾರ ನಿಯಮ ಪಾಲಿಸದೆ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಆಟೋಗಳ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ಇಲಾಖೆಯಿಂದ ಎಷ್ಟೇ ಎಚ್ಚರಿಕೆ, ಸೂಚನೆ ನೀಡಿದರೂ ಬಹುತೇಕ ಆಟೋ ಚಾಲಕರು ಸಮವಸ್ತ$ ಧರಿಸದೇ ಆಟೋ ಓಡಿಸುತ್ತಿರುವುದು ಕಂಡುಬಂದಿದೆ ಎಂದರು. ಇದರೊಂದಿಗೆ ಆಟೋ ರಿಾ ಚಾಲಕರಿಗೆ ದಾಖಲೆಗಳ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ, ಆಟೋ ರಿಾ ಚಾಲಕರು ಸಂಚಾರ ನಿಯಮ ಪಾಲಿಸಬೇಕು. ಸಾರ್ವಜನಿಕರು, ಪ್ರಯಾಣಿಕರಿಗೆ ತೊಂದರೆ ನೀಡಬಾರದು. ಪ್ರಯಾಣಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net