ಕೀಟನಾಶಕ ಅನಧಿಕೃತ ದಾಸ್ತಾನು ಜಪ್ತಿ

13
ಪಾವಗಡ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ) ಪುಟ್ಟರಂಗಯ್ಯ ಮತ್ತು ವೈ.ಅಶ್ವತ್ಥನಾರಾಯಣ ಅವರು ವಶಪಡಿಸಿಕೊಂಡಿರುವ ಅನಧಿಕೃತ ಕೀಟನಾಶಕ
Published on

ತಾಲೂಕು ಸಹಾಯಕ ಕೃಷಿ ನಿರ್ದೇಶಕರ ತಂಡದಿಂದ ದಾಳಿ

ವೈ.ಎನ್​.ಹೊಸಕೋಟೆ: ಪಾವಗಡ ತಾಲೂಕು ವೈ.ಎನ್​.ಹೊಸಕೋಟೆ ಹೋಬಳಿಯ ದೊಡ್ಡಹಳ್ಳಿಯ ರಸಗೊಬ್ಬರ ಅಂಗಡಿ ಮೇಲೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ದಾಳಿ ನಡೆಸಿ, ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಒಟ್ಟು 4.55 ಲಕ್ಷ ರೂ. ಮೌಲ್ಯದ 460 ಕೆಜಿ ತೂಕದ ನೈಟ್ರೋಬೆಂಜೀನ್​ 20 ಲಘು ಪೋಷಕಾಂಶದ 780 ಪ್ಯಾಕೆಟ್​ಗಳನ್ನು ಜಪ್ತಿಮಾಡಿದ್ದಾರೆ. ಗ್ರಾಮದ ಎಸ್​.ಎಲ್​.ಎನ್​ ಕೀಟನಾಶಕ ಅಂಗಡಿಯಲ್ಲಿ ಅಕ್ರಮವಾಗಿ ನೈಟ್ರೋಜೀನ್​&20 ಕೀಟನಾಶಕ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಸಗೊಬ್ಬರ ಮಾರಾಟಗಾರರು ಮತ್ತು ಸರಬರಾಜುದಾರರ ನಿಯಂತ್ರಣ ಆದೇಶ&1985 ಮತ್ತು ಅಗತ್ಯ ವಸ್ತುಗಳ ಅಧಿನಿಯಮ&1955ರ ಉಲ್ಲಂನೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಪುಟ್ಟರಂಗಯ್ಯ ಮತ್ತು ವೈ.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಇದೇ ಅಂಗಡಿ ಮೇಲೆ ಕೆಲ ದಿನಗಳ ಹಿಂದೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ದಾಳಿ ನಡೆಸಿ, ಕ್ರಮ ಕೈಗೊಂಡಿದ್ದರೂ ಮಾಲೀಕರು ಎಚ್ಚೆತ್ತುಕೊಂಡಿಲ್ಲ ಎನ್ನಲಾಗಿದೆ.

ಪಾವಗಡ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ (ಜಾರಿದಳ) ಪುಟ್ಟರಂಗಯ್ಯ ಮತ್ತು ವೈ.ಅಶ್ವತ್ಥನಾರಾಯಣ ಅವರು ವಶಪಡಿಸಿಕೊಂಡಿರುವ ಅನಧಿಕೃತ ಕೀಟನಾಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net