

ಎನ್.ಆರ್.ಪುರ: ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಗಳ ಸೇವೆಗಳ ನಿರ್ದೇಶನಾಲಯದಿಂದ ಅಂಗಡಿಗಳ ಮೇಲೆ ದಾಳಿ ನಡೆಸಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು 9 ಪ್ರಕರಣಗಳನ್ನು ದಾಖಲಿಸಿ, 2800 ರೂಪಾಯಿ ದಂಡ ವಸೂಲಿ ಮಾಡಲಾಯಿತು.
ಶಾಲೆಗಳು ಹಾಗೂ ಸಾರ್ವಜನಿಕ ಆಸ್ಪತ್ರೆ ಸಮೀಪ 100 ಮೀಟರ್ ಒಳಗೆ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ನಾಗೇಂದ್ರಪ್ಪ, ಕೇಶವಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೆಬಾಸ್ಟಿನ್, ಪೊಲೀಸ್ ಪೇದೆ ಚಂದ್ರಕಾಂತ್ ಪೂಜಾರಿ ಇದ್ದರು.