ತಪಾಸಣಾ ಕೇಂದ್ರದಲ್ಲಿ ಹಣ ವಶ

download
Published on


ಕೊಡಗು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಗಡಿ ತಪಾಸಣೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಿರಾಜಪೇಟೆ ಪೆರುಂಬಾಡಿ ತಪಾಸಣೆ ಕೇಂದ್ರದ ಬಳಿ ತಡ ರಾತ್ರಿ ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರೆ.
ವಿರಾಜಪೇಟೆ ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದಲ್ಲಿ ಕೇರಳ ರಾಜ್ಯದಿಂದ ಗಡಿಯ ಮೂಲಕ ರಾಜ್ಯಕ್ಕೆ ಬರುವ ಎಲ್ಲ ರೀತಿಯ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗುರುವಾರ ರಾತ್ರಿ ಕೇರಳದಿಂದ ರಾಜ್ಯಕ್ಕೆ ಬಂದ ಕಾರಿನಲ್ಲಿ ದಾಖಲೆಯಿಲ್ಲದ 95,500 ರೂ. ಅನ್ನು ವಶಕ್ಕೆ ಪಡೆದಿದ್ದಾರೆ. ತಪಾಸಣೆ ಕೇಂದ್ರದಲ್ಲಿ ಸ್ಥಿರ ಕಣ್ಗಾವಲು ತಂಡದ ವೆಂಕಟೇಶ್, ಅಶ್ವಿನ್ ಕುಮಾರ್ , ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net