ಅಕ್ರಮ ಸಾಗಾಟದ ಮರಳು ವಶ

crime-logo
Published on

ಪಡುಬಿದ್ರಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಸಹಿತ ಚಾಲಕ ತೀರ್ಥಹಳ್ಳಿ ಬೆಜ್ಜವಳ್ಳಿ ಮೃತ್ಯುಂಜಯ ಎಂಬಾತನನ್ನು ಕಾಪು ಠಾಣೆ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ರಾಷ್ಟ್ರೀಯ ಹೆದ್ದಾರಿ 66ರ ಕಾಪು ಪಡುಗ್ರಾಮದ ಬಳಿ ತಪಾಸಣೆ ನಡೆಸುತ್ತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಟಿಪ್ಪರ್ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಮರಳು ತುಂಬಿರುವುದು ಗೊತ್ತಾಗಿದೆ. ಈ ಬಗ್ಗೆ ಚಾಲಕನನ್ನು ವಿಚಾರಿಸಿದಾಗ ಟಿಪ್ಪರ್ ಪಡುಬಿದ್ರಿ ನಡ್ಸಾಲು ಗ್ರಾಮದ ಮಯ್ಯದ್ದಿ ಹುಸೇನ್‌ಗೆ ಸೇರಿದ್ದು ಎಂದು ತಿಳಿಸಿದ್ದನು. ಪೊಲೀಸರು ಚಾಲಕ ಹಾಗೂ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net