

ಮೈಸೂರು: ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನನ್ನ ಪತಿಗೆ ಬರಬೇಕಾದ ಆಸ್ತಿ ಕಬಳಿಸಿದ್ದು, ಈ ಸಂಬಂಧ ಎನ್.ಆರ್. ಪೊಲೀಸ್ ಠಾಣೆಗೆ ದೂರು ನೀಡಲು ಹೋದಲ್ಲಿ ದೂರು ಸ್ವೀಕರಿಸುತ್ತಿಲ್ಲ ಎಂದು ಸಂತ್ರಸ್ತೆ ನಾಗವೇಣಿ ಆರೋಪಿಸಿದ್ದಾರೆ.
ನಾನು 2007ರಲ್ಲಿ ಗಾಂಧಿನಗರದ ಮಹದೇವಸ್ವಾಮಿ ಎಂಬುವರನ್ನು ವಿವಾಹವಾಗಿದ್ದು, ಅವರು 2014 ರಲ್ಲಿ ನಿಧನರಾದರು. ಆದರೆ ಪತಿಯ ಸಹೋದರಿಯೊಬ್ಬರು ಮಹದೇವಸ್ವಾಮಿ ಅವಿವಾಹಿತರಾಗಿದ್ದರೆಂದು ನಕಲಿ ದಾಖಲೆ ಸೃಷ್ಟಿಸಿ ತಮಗೆ ಬರಬೇಕಾಗಿದ್ದ ಆಸ್ತಿ ಕಬಳಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪತಿಯ ಮರಣ ನಂತರ ನಾನು ತಲಕಾಡಿನಲ್ಲಿನ ನಮ್ಮ ತಾಯಿ ಮನೆಯಲ್ಲಿ ವಾಸಿಸುತ್ತಿದ್ದು, ತನ್ನ ಪತಿಯ ಸಹೋದರಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಬೆಲೆಬಾಳುವ ಕಸಬಾ ಹೋಬಳಿ ಕೆಸರೆ ಗ್ರಾಮದಲ್ಲಿನ 1.22 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಈ ಬಗ್ಗೆ ಎನ್.ಆರ್. ಪೊಲೀಸ್ ಠಾಣೆಗೆ ದೂರು ನೀಡಲು ಹೋದಲ್ಲಿ ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ದೂರು ದಾಖಲಾಗುವಂತೆ ನೋಡಿಕೊಂಡು ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಠಾಣೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಿದ್ದರಾಜು, ಮಲ್ಲೇಶ್, ಕುಮಾರ್ ಗಾಂಧಿನಗರ ಹಾಗೂ ಶಿವಣ್ಣ ಇದ್ದರು.