ನಾಲ್ಕು ದ್ವಿಚಕ್ರ ವಾಹನಗಳ ವಶ

FotoJet (1)
ಬಂಗಾರಪೇಟೆ ಪೊಲೀಸರು ಇಬ್ಬರು ಆರೋಪಿಗಳಿಂದ ನಾಲ್ಕು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿರುವುದು.
Published on

ಬಂಗಾರಪೇಟೆ: ಪಟ್ಟಣದ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವಿವಿಧೆಡೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ಬಾಯಿ ಬಿಟ್ಟಿದ್ದು, ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಸಿ.ರಹೀಂ ಮುಕ್ತಿಯಾರ್​ ಪಾಷಾ, ಕಾರಹಳ್ಳಿಯ ಇಮ್ರಾನ್​ ಬಂಧಿತರು. ಪೊಲೀಸ್​ ಇನ್​ಸ್ಪೆಕ್ಟರ್​ ಆರ್​.ದಯಾನಂದ್​ ಮಾರ್ಗದರ್ಶನದಲ್ಲಿ ಪಟ್ಟಣದ ಬಸ್​ ನಿಲ್ದಾಣದಲ್ಲಿ ಪಿಎಸ್​ಐ ರಾಜಣ್ಣ, ಸಿಬ್ಬಂದಿ ಎಂ.ನಾಗೇಶ್​, ಚಲಪತಿ, ವೆಂಕಟೇಶ್​ ಐಎಂವಿ ಪ್ರಕರಣಗಳನ್ನು ದಾಖಲಿಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರನ್ನು ವಿಚಾರಿಸಿದಾಗ ದಾಖಲೆಗಳಿಲ್ಲದ ವಾಹನಗಳಲ್ಲಿ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ. ನಂತರ ಪೊಲೀಸ್​ ಠಾಣೆಗೆ ಕರೆತಂದು ಡಿವೈಎಸ್​ಪಿ ಎಸ್​.ಪಾಂಡುರಂಗ ಸೂಚನೆ ಮೇರೆಗೆ ದೂರು ದಾಖಲಿಸಿಕೊಂಡು ವಿಚಾರಣೆ ಮಾಡಿದ ಪಿಎಸ್​ಐ ಪ್ರಕಾಶ್​ ನರಸಿಂಗ್​ ಹಾಗೂ ತಂಡ ಆರೋಪಿಗಳಿಂದ ಒಟ್ಟು 4 ಬೈಕ್​ಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net