ಆರ್ನಾ ರೆಸಿಡೆನ್ಸಿಯಲ್ಲಿದ್ದ ಹಣ ಜಪ್ತಿ; ಕೇಶ್ವಾಪುರ ಎಸ್‌ಬಿಐ ಶಾಖೆಗೆ ಹಣ ರವಾನೆ

Oplus_131072
Oplus_131072
Published on

ಧಾರವಾಡ: ನಗರದ ದಾಸನಕೊಪ್ಪ ವೃತ್ತ ಬಳಿಯ ನಾರಾಯಣಪುರದ ಆರ್ನಾ ರೆಸಿಡೆನ್ಸಿಯಲ್ಲಿ ಮಂಗಳವಾರ ವಶಪಡಿಸಿಕೊಂಡು 18 ಕೋಟಿ ನಗದನ್ನು ಆದಾಯ ತೆರಿಗೆ ಅಽಕಾರಿಗಳು ಬುಧವಾರ ಹುಬ್ಬಳ್ಳಿಯ ಕೇಶ್ವಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ರವಾನಿಸಿದ್ದಾರೆ.
ಬಸವರಾಜ ದತ್ತುನವರ ಎಂಬುವರ ಫ್ಲಾ ್ಯಟ್ ಸಂಖ್ಯೆ 303ರಲ್ಲಿ ಮದ್ಯ ಸಂಗ್ರಹಣೆ ಮಾಡಿರುವ ಮಾಹಿತಿ ಬಂದಿತ್ತು. ಅಬಕಾರಿ ಇಲಾಖೆ ಅಽಕಾರಿಗಳ ತಂಡ ದಾಳಿ ಮಾಡಿದಾಗ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಹೀಗಾಗಿ ಅಬಕಾರಿ ಅಽಕಾರಿಗಳು ಚುನಾವಣಾ ಎ-ï‌ಎಸ್‌ಟಿ ತಂಡಕ್ಕೆ ಮಾಹಿತಿ ನೀಡಿದ್ದರು. ಸ್ಥಳದಲ್ಲಿ ೧೦ ಲಕ್ಷಕ್ಕಿಂತ ಅಽಕ ಹಣ ಪತ್ತೆಯÁಗಿದ್ದರಿಂದ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿತ್ತು.
ಆದಾಯ ತೆರಿಗೆ ಇಲಾಖೆ ಅಽಕಾರಿಗಳು ಪೊಲೀಸ್ ಬಂದೋಬಸ್ತ್ನಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೆಗೂ ಕಾರ್ಯಾಚರಣೆ ನಡೆಸಿತು. ಸ್ಥಳದಲ್ಲಿದ್ದ ಬಸವರಾಜ ದತ್ತುನವರ ಅವರನ್ನು ವಿಚಾರಣೆ ನಡೆಸಿ ನಗದನ್ನು ಜಪ್ತಿ ಮಾಡಿದ್ದರು. ರಾತ್ರಿಯಿಡೀ ೨ ಹಣ ಎಣಿಕೆ ಯಂತ್ರದಿAದ ನಗದು ಎಣಿಕೆ ಮಾಡಿದ್ದಾರೆ. ಸ್ಥಳದಲ್ಲಿ ಸುಮಾರು ೧೮ ಕೋಟಿ ರೂಪಾಯಿ ಪತ್ತೆಯಾಗಿದೆ ಎನ್ನಲಾಗಿದೆ.
ವಶಪಡಿಸಿಕೊಂಡ ಹಣವನ್ನು ೧೮ ಬ್ಯಾಗ್‌ಗಳಲ್ಲಿ ತುಂಬಿ ಪೊಲೀಸ್ ಭದ್ರತೆಯಲ್ಲಿ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐಗೆ ಶಾಖೆಗೆ ರವಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net