ಕಳ್ಳರಿಂದ 15 ಬ್ಯಾಟರಿ, ದ್ವಿಚಕ್ರ ವಾಹನ ವಶ

UPBR battery Seized
Published on

ಧಾರವಾಡ: ತಾಲೂಕಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಯೊಂದರಲ್ಲಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಗರಗ ಠಾಣೆ ಪೊಲೀಸರು ಬಂಧಿಸಿ, ಅವರಿಂದ 15 ಬ್ಯಾಟರಿ ಹಾಗೂ ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಹೆಗ್ಗೇರಿಯ ನಾಶೀರ ದಾವಲನವರ, ರಸೂಲಸಾಬ ಶೇಖಸನದಿ, ವೀರಾಪುರದ ಹೂವಪ್ಪ ಜೀರಗೋಡ ಬಂಧಿತ ಆರೋಪಿಗಳು. ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಎಸ್ಟೀಮ್ ಇಂಟಿಗ್ರೇಟೆಡ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ 19 ಬ್ಯಾಟರಿಗಳು ಕಳುವಾದ ಕುರಿತು ಗರಗ ಠಾಣೆಯಲ್ಲಿ ಏ. 12ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ಖಚಿತ ಮಾಹಿತಿ ಆಧರಿಸಿ ಪೊಲೀಸರು ಮೂವರನ್ನು ಬಂಧಿಸಿ, ಅವರಿಂದ ಎಕ್ಸೈಡ್ ಕಂಪನಿಯ 1.27 ಲಕ್ಷ ರೂ. ಮೌಲ್ಯದ 15 ಬ್ಯಾಟರಿಗಳು ಹಾಗೂ ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಗೋಪಾಲ ಬ್ಯಾಕೋಡ, ಡಿವೈಎಸ್‌ಪಿ ಎಸ್.ಎಂ. ನಾಗರಾಜ ಮಾರ್ಗದರ್ಶನದಲ್ಲಿ ಗರಗ ಸಿಪಿಐ ಸಮೀರ ಮುಲ್ಲಾ ನೇತೃತ್ವದಲ್ಲಿ ಗರಗ ಪಿಎಸ್‌ಐ ಪ್ರಕಾಶ ಡಿ. ಹಾಗೂ ಎಫ್.ಎಂ. ಮಂಟೂರ, ಸಿಬ್ಬಂದಿ ಎಸ್.ಎ. ರಾಮನಗೌಡರ, ಜಿ.ಪಿ. ದೂಪದಾಳ, ವಿಶ್ವನಾಥ ಮುರಗೋಡ, ಸುರೇಶ ಹುರಳಿ, ಮಂಜುನಾಥ ಕೆಲಗೇರಿ, ಪ್ರವೀಣ ಬಾಗೇವಾಡಿ, ಉಳವೀಶ ಸಂಪಗಾವಿ, ಈರಪ್ಪ ಲಮಾಣಿ, ಮಂಜು ಕೆರೂರ, ಗಣೇಶ ಪವಾರ, ಹುಚ್ಚೇಶ ಮಲ್ಲೇಣ್ಣವರ, ಪ್ರಸಾದ ಬಡಿಗೇರ, ರಾಜು ಕಿರೂಂದ, ದಿಲೀಪ ಲಮಾಣಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net