

ಕದರೀಪುರ: ವೇಮಗಲ್ ಹೋಬಳಿಯ ಸೀತಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಜನರ ಕೈಗೆ ಸಿಗದೆ, ಮನ ಬಂದಂತೆ ಹಣ ವ್ಯಯಿಸಿ, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಿಡಿಒ ಮತ್ತು ಬಿಲ್ ಕಲೆಕ್ಟೆರ್ ಹುದ್ದೆ ಖಾಲಿ ಇದ್ದು, ಗ್ರಾಪಂ ಕಾರ್ಯದರ್ಶಿಯೇ ಪಿಡಿಒ, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಮೂರು ಹುದ್ದೆಗಳ ಹೊಣೆಹೊತ್ತಿರುವ ಜತೆಗೆ ಪಕ್ಕದ ಅಮ್ಮನಲ್ಲೂರು ಗ್ರಾಪಂನ ಕಾರ್ಯದರ್ಶಿಯಾಗಿಯೂ ಉಸ್ತುವಾರಿ ವಹಿಸಿಕೊಂಡಿದ್ದು, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಮೂಲಸೌಲಭ್ಯ ಒದಗಿಸುತ್ತಿಲ್ಲ, 15ನೇ ಹಣಕಾಸಿನಲ್ಲಿ ಅನವಶ್ಯಕ ಕೆಲಸಗಳಿಗೆ ಹಣ ವ್ಯಯ ಮಾಡುತ್ತಿದ್ದು, ಯಾರ ಗಮನಕ್ಕೂ ತರದೆ ನರೇಗಾ ಕಾಮಗಾರಿ ಮಾಡಿಸಿ ಬಿಲ್ ಮಾಡುತ್ತಿದ್ದಾರೆ ಎಂದು ನಾಗರಿಕರಿಂದ ಆರೋಪ ಕೇಳಿಬಂದಿದೆ.
ಸಿಸಿ ಚರಂಡಿ, ಸಿಸಿ ರಸ್ತೆ , ಬೀದಿ ದೀಪ, ಅಂಗನವಾಡಿ, ಶಾಲೆ ಅಭಿವೃದ್ಧಿ, ನೀರಿನ ಸೌಲಭ್ಯ, ಕುರಿ&ಮೇಕೆ, ದನದ ಕೊಟ್ಟಿಗೆ, ವಸತಿ ಯೋಜನೆ, ಅಂಗವಿಕಲರು ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸೇರಿ ಇನ್ನಿತರ ಕೆಲಸ ಮಾಡುವಲ್ಲಿ ರ್ನಿಲಕ್ಷ$್ಯ ವಹಿಸಿದ್ದಾರೆ ಎನ್ನಲಾಗಿದೆ. ಶುದ್ಧ ನೀರಿನ ಟಕ ಕೆಡವಿ 3 ತಿಂಗಳು ಕಳೆದರೂ ಬದಲಿ ಸೌಲಭ್ಯ ಕಲ್ಪಿಸಿಲ್ಲ. ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಹೊಣೆಹೊತ್ತವರು ರ್ನಿಲಕ್ಷ$್ಯ ಮಾಡಿರುವುದರಿಂದ ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಹುದ್ದೆ ಭರ್ತಿಗೆ ಕ್ರಮವಾಗಲಿ
ಎರಡು ವರ್ಷದ ಹಿಂದೆ ಬಿಲ್ ಕಲೆಕ್ಟರ್ ಅಶ್ವತ್ಥ್ ಕಾರ್ಯದರ್ಶಿಯಾಗಿ ಬಡ್ತಿ ಪಡೆದು ವರ್ಗಾವಣೆಯಾಗಿದ್ದಾರೆ. ನಂತರ ಪಿಡಿಒ ಲಕ್ಷಿ$್ಮಪತಿ 2024ರ ನವೆಂಬರ್ನಲ್ಲಿ ವಯೋನಿವೃತ್ತಿ ಪಡೆದುಕೊಂಡಿದ್ದಾರೆ. ಪಿಡಿಒ ಮತ್ತು ಬಿಲ್ ಕಲೆಕ್ಟರ್ ಎರಡೂ ಹುದ್ದೆ ಖಾಲಿ ಯಾಗಿದ್ದು, ಕೂಡಲೇ ಸರ್ಕಾರ ಕಾಯಂ ಅಧಿಕಾರಿಗಳ ನೇಮಕ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೆಲಸ ಮಾಡದೆ ಬಿಲ್
ನರೇಗಾ ಯೋಜನೆಯಡಿ ಕಾಮಗಾರಿ ನಡೆಸುವ ಮುನ್ನ ಗ್ರಾಮ ಸಭೆ, ವಾರ್ಡ್ ಸಭೆ ನಡೆಸದೆ, ಸಾರ್ವಜನಿಕರಿಗೆ ಮಾಹಿತಿ ತಲುಪಿಸದೆ ಪಿಡಿಒ ಮತ್ತು ಅಧ್ಯ&ಉಪಾಧ್ಯಕ್ಷ, ಸದಸ್ಯರೆಲ್ಲರೂ ಗುಟ್ಟಾಗಿ ಸಭೆ ನಡೆಸಿ ಅವರವರ ಅನುಕೂಲಕ್ಕೆ ತಕ್ಕಂಗೆ ಪಟ್ಟಿ ಮಾಡಿ, ಕೆಲಸ ಮಾಡದೆ ಗೋಡೆ ಬರಹ ಬರೆಸಿ ಬಿಲ್ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಅಕ್ರಮ ನಡೆದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಪೂರ್ಣಗೊಳ್ಳದ ಕಾಮಗಾರಿ
ಪಂಚಾಯಿತಿ ಮುಂಭಾಗ ವ್ಯಾಪಾರಿಗಳ ಅಂಗಡಿಗಳನ್ನು ಪಂಚಾಯಿತಿ ತೆರವು ಗೊಳಿಸಿ ಒಂದೇ ಲೇನ್ನಲ್ಲಿ 23 ಮಳಿಗೆ ನಿರ್ಮಿಸುತ್ತಿದ್ದು, 3 ತಿಂಗಳಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ವ್ಯಾಪಾರಸ್ಥರೂ ಬೀದಿಗೆ ಬಿದ್ದಿದ್ದು, ಏ.2 ರಂದು ಜಾತ್ರಾ ಮಹೋತ್ಸವಕ್ಕೂ ಕಾಮಗಾರಿ ಅಡಚಣೆಯಾಗಲಿದೆ.
"ಸೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳು ಸಕ್ರಮವಾಗಿದ್ದರೂ ಇ&ಖಾತೆ ಮಾಡಲು ಲಂಚದ ಬೇಡಿಕೆ ಇಡುತ್ತಾರೆ. ಕಚೇರಿಗೆ ತಿಂಗಳಾನುಗಟ್ಟಲೆ ಅಲೆಸುತ್ತಾರೆ. ಸಾರ್ವಜನಿಕರ ಕಷ್ಟ ಕೇಳೋರೋ ಇಲ್ಲದಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಬಡವರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು."
- ಮಠಪುರ ಶ್ರೀನಿವಾಸ್
ಉಪಾಧ್ಯ ಅಖಿಲ ಕರ್ನಾಟಕ ದಲಿತ ಅಭಿವೃದ್ಧಿ ಸಮಿತಿ
"ನರೇಗಾ ಯೋಜನೆಯ ಎಲ್ಲ ಕಾಮಗಾರಿಗಳನ್ನು ಸೀತಿ ಗ್ರಾಪಂ ಅಧಿಕಾರಿಯೇ ಮಾಡಿಸುತ್ತಾರೆ. ಅವು ಕಳಪೆಯಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಮೂಲಿ ಕೊಟ್ಟು ಬಿಲ್ಗಳು ಪಾಸ್ ಮಾಡಿಕೊಂಡು ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು."
- ರಾಮಕ್ಕನವರ ನಾರಾಯಣಸ್ವಾಮಿ
ನಿರ್ದೇಶಕ ಎಸ್ಎ್ಎಸ್ಸಿಎಸ್, ಸೀತಿ.
"ಸೀತಿ ಗ್ರಾಪಂನಲ್ಲಿ ಪಿಡಿಒ ಹುದ್ದೆಗೆ ಕಾರ್ಯದರ್ಶಿಯನ್ನು ಪಿಡಿಒ ಉಸ್ತುವಾರಿಯಾಗಿ ನೇಮಿಸಲಾಗಿದೆ, ಸೋಮವಾರ ಸೀತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾರ್ವಜನಿಕರ ದೂರುಗಳ ಬಗ್ಗೆ ವಿಚಾರಣೆ ಮಾಡಲಾಗುವುದು."
- ಮಂಜುನಾಥ್ ಬಿ. ಎಂ.
ಇಒ ತಾಲೂಕು ಪಂಚಾಯಿತಿ ಕೋಲಾರ