

ಚಿಕ್ಕಬಳ್ಳಾಪುರ: ಸಂಜೀವಿನಿ - ಡೇ ಎನ್‌ಆರ್‌ಎಲ್‌ಎಂ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್) ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 2224 ಹೊಸ ಸ್ವಸಹಾಯ ಸಂಘ ರಚನೆಯ ಗುರಿ ಪೈಕಿ 1156 ಸಂಘಗಳು ಅಸ್ತಿತ್ವಕ್ಕೆ ಬಂದಿವೆ.
ಈಗಾಗಲೇ ಜಿಲ್ಲೆಯಲ್ಲಿ 157 ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿದ್ದು, 9555 ಸ್ವಸಹಾಯ ಸಂಘಗಳಲ್ಲಿ 95273 ಸದಸ್ಯರಿದ್ದಾರೆ. ಗ್ರಾಮೀಣ ಪ್ರದೇಶದ ಬಡತನ ತೀವ್ರತೆ ಕಡಿಮೆಗೊಳಿಸಲು ಮಹಿಳಾ ಸ್ವಸಹಾಯ ಗುಂಪುಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಮೂಲಕ ಬಲವರ್ಧನೆ, ಆರ್ಥಿಕ ನೆರವು ಒದಗಿಸುವುದು, ಜೀವನೋಪಾಯಕ್ಕಾಗಿ ವಿವಿಧ ಚಟುವಟಿಕೆ ಕೈಗೊಂಡು ಸ್ವಾವಲಂಬಿಯನ್ನಾಗಿಸುವುದು ಸಂಜೀವಿನಿ ಡೇ ಎನ್‌ಆರ್‌ಎಲ್‌ಎಂ ಯೋಜನೆ ಉದ್ದೇಶವಾಗಿದೆ.
ಅನುದಾನದ ನೆರವಿನ ಸಾಧನೆ
ಬ್ಯಾಂಕ್ ಲಿಂಕ್ ಮೂಲಕ 2782 ಸಂಘಗಳು ಸಾಲ ಪಡೆದಿವೆ. ಇನ್ನು ಆರಂಭಿಕ ನಿಧಿಯಡಿ 137 ಗ್ರಾಪಂ ಒಕ್ಕೂಟಗಳಿಗೆ 86.25 ಲಕ್ಷ ರೂ., ಬಂಡವಾಳ ನಿಧಿಯಡಿ 157 ಗ್ರಾಪಂ ಒಕ್ಕೂಟಗಳಿಗೆ 39.46 ಕೋಟಿ ರೂ, ಎನ್‌ಆರ್‌ಎಲ್‌ಎಂ ಸುತ್ತುನಿಧಿ ಅಡಿ 1099 ಸ್ವಸಹಾಯ ಸಂಘಗಳಿಗೆ 1.98 ಕೋಟಿ ರೂ., ದುರ್ಬಲ ವರ್ಗದ ನಿಧಿಯಡಿ 74 ಗ್ರಾಪಂ ಒಕ್ಕೂಟಗಳಿಗೆ ತಲಾ 1 ಲಕ್ಷ ರೂ ಸಿಕ್ಕಿದೆ. ಎಸ್‌ಎಸ್‌ವೈ (ಸೀ ಸಾಮರ್ಥ್ಯ) ಯೋಜನೆಯಡಿ 1550 ಲಾನುಭವಿಗಳಿಗೆ 15.5 ಕೋಟಿ ರೂ., ಪಿಎಂಎ್ಎಂಇ (ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳು)ಯೋಜನೆಯಡಿ 335 ಸದಸ್ಯರಿಗೆ ಬಿಡುಗಡೆಯಾದ ಹಣ 1.34 ಕೋಟಿ ರೂ., ಸಾಮಾಜಿಕ ಸುರಕ್ಷಾ ಯೋಜನೆಯಡಿ 9299 ಸ್ವಸಹಾಯ ಗುಂಪುಗಳ ಸದಸ್ಯರ ಹೆಸರನ್ನು ನೋಂದಾಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳು ಮಹಿಳೆಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಒಕ್ಕೂಟದ ಮೂಲಕ ಸಂಘಟನೆ, ಸಾಮೂಹಿಕ ಚಟುವಟಿಕೆಯ ಮೂಲಕ ಆರ್ಥಿಕಾಭಿವೃದ್ಧಿ, ಸ್ವಯಂ ಉದ್ಯೋಗ ಸೃಷ್ಟಿ, ಸ್ಥಳೀಯವಾಗಿ ನಾನಾ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ಸೇರಿ ವಿವಿಧ ಅನುಕೂಲವಾಗುತ್ತಿವೆ. ಇದರ ನಡುವೆ ಸಮಾಜದ ಮುಖ್ಯವಾಹಿನಿಗೆ ಬಾರದ ಮಹಿಳೆಯರನ್ನು ಗುರುತಿಸಿ, ಅಭಿವೃದ್ಧಿಗೆ ಶ್ರಮಿಸಬೇಕಾಗಿರುವುದರಲ್ಲಿ ಮತ್ತಷ್ಟು ಸಾಧನೆಯ ನಿರೀಕ್ಷೆ ಇದೆ.