

ಯಳಂದೂರು: ತಾಲೂಕಿನ ಸೀರ್ವಿ ಸಮಾಜ ಚಾಮುಂಡೇಶ್ವರಿ ಗೇರ್ ನೃತ್ಯ ಕಲಾ ತಂಡವು ಈ ಬಾರಿ ಮೈಸೂರು ದಸರಾ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಗಮನ ಸೆಳೆಯಿತು.
ರಾಜಸ್ಥಾನದ ಮೂಲ ನಿವಾಸಿಗಳಾದ ಇವರು ಕಳೆದ ಹಲವು ವರ್ಷಗಳಿಂದ ತಾಲೂಕಿನಲ್ಲಿ ನೆಲೆಸಿದ್ದಾರೆ. ಇವರು ಬಟ್ಟೆ ವ್ಯಾಪಾರ, ಚಿಲ್ಲರೆ ವ್ಯಾಪಾರ, ಚಿನ್ನದ ಅಂಗಡಿ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಕೊಂಡು ತಾಲೂಕಿನಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದಾರೆ. ಈ ಬಾರಿ ಮೈಸೂರು ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಕಲಾ ತಂಡಕ್ಕೆ ಅವಕಾಶ ಕಲ್ಪಿಸಿದ್ದು, ಮೆರವಣಿಗೆಯಲ್ಲಿ ರಾಜಸ್ಥಾನದ ಸೀರ್ವಿ ಸಮಾಜದ ನೃತ್ಯ ಪ್ರದರ್ಶಿಸಿಸುವ ಮೂಲಕ ಗಮನ ಸೆಳೆಯಿತು.